ಧಾರವಾಡ –
ಪೂಜೆ ಮಾಡಿಸುವ ನೆಪದಲ್ಲಿ ದೇವಸ್ಥಾನದಲ್ಲಿ ಕಳ್ಳತನ ಮಾಡಿರುವ ಘಟನೆ ಧಾರವಾಡದ ನಾಯಕನೂರು ಗ್ರಾಮದಲ್ಲಿ ನಡೆದಿದೆ. ನವಲಗುಂದ ತಾಲೂಕಿನ ನಾಯಕನೂರು ಗ್ರಾಮದ ಕರಿಯಮ್ಮದೇವಿ ದೇವಸ್ಥಾನದಲ್ಲಿ ಈ ಒಂದು ಕಳ್ಳತನ ನಡೆದಿದೆ.

ಬೆಳ್ಳಂ ಬೆಳಿಗ್ಗೆ ದೇವಸ್ಥಾನಕ್ಕೆ ಮೂರು ನಾಲ್ಕು ಜನರು ಬಂದು ಪೂಜಾರಿ ಕೈಯಲ್ಲಿ ಪೂಜೆಗಾಗಿ ಕಾಯಿಯನ್ನು ಕೊಟ್ಟಿದ್ದಾರೆ. ಕಾಯಿ ಪೂಜೆ ಮಾಡಿಕೊಂಡು ಬರಲು ಹೋಗಿದ್ದನ್ನು ನೋಡಿದ ಖದೀಮರು ದೇವಿಯ ಮೇಲಿದ್ದ ಬಂಗಾರ ಬೆಳ್ಳಿಯ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಎಸ್ಕೇಪ್ ಆಗಿದ್ದಾರೆ .

ಮೂರು ನಾಲ್ಕು ಲಕ್ಷ ರೂಪಾಯಿಗಳ ಮೌಲ್ಯದ ಬಂಗಾರ ಬೆಳ್ಳಿ ಯ ಆಭರಣಗಳು ಕಳ್ಳತನವಾಗಿದ್ದು ಇನ್ನೂ ವಿಷಯ ತಿಳಿದ ನವಲಗುಂದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ. ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಊರು ಇದಾಗಿದೆ.