ಧಾರವಾಡ –
ಫೆ. 12 ರಿಂದ 16 ರವರೆಗೆ ಧಾರವಾಡದ ಶ್ರೀ ಮದಥಣಿ ಮುರುಘೇಂದ್ರ ಮಹಾಶಿವಯೋಗಿ ಗಳವರ ಜಾತ್ರಾ ಮಹೋತ್ಸವ ಕಾರ್ಯಕ್ರಮ.
ಈ ಒಂದು ಜಾತ್ರೆಯ ನಿಮಿತ್ಯ ವಿಶೇಷ ಉಪನ್ಯಾಸ, ಶ್ರೀ ಮೃತ್ಯುಂಜಯ ಮಹಾಂತ ಪ್ರಶಸ್ತಿ ಪ್ರಧಾನ ಸಾಹಿತ್ಯ-ಸಂಗೀತ-ಸಾಂಸ್ಕೃತಿಕ, ಕಾರ್ಯಕ್ರಮ, ವಚನ ಗಾಯನ ಮತ್ತು ರಥೋತ್ಸವ ನಡೆಯಲಿವೆ ಎಂದು ಮಲ್ಲಿಕಾರ್ಜುನ ಸ್ವಾಮಿಜಿ ಹೇಳಿದರು.
ಫೆ. 12 ರಿಂದ 16 ರವರೆಗೆ ಜರುಗಲಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು.. “ಬಸವ” ಮಾರ್ಗದಲ್ಲಿಯೇ ನಡೆದು, “ಬಸವ” ಮಾರ್ಗದಲ್ಲಿಯೇ ದುಡಿದು, ಬಸವಾದರ್ಶದ ಪರಿಭಾಷೆಯಲ್ಲಿಯೇ ಸತ್ವಪೂರ್ಣ ಬದುಕು ಸವೆಸಿದ ಲಿಂ. ಮೃತ್ಯುಂಜಯಪ್ಪಗಳವರ ಕನ್ನಡ ನಾಡು ಕಂಡ ಅಪ್ರತಿಮ ತ್ರಿವಿಧ ದಾಸೋಹಿಗಳು. “ಅಪ್ಪ” ಎನ್ನುವ ಶಬ್ದದ ಗೌರವ ಹೆಚ್ಚಿಸಿದ ಮಹಾತ್ಮರು ಪೂಜ್ಯ ಅಪ್ಪಗಳವರು. ಅವರ ಮಾರ್ಗದರ್ಶನದಂತೆ ಈ ಸಲದ ಜಾತ್ರೆಯು ಶರಣತತ್ವ ಸೌರಭ, ಸಾರಸ್ವತ ಪ್ರಭೆ ಹಾಗೂ ಸಾಂಸ್ಕೃತಿಕ ಮಹಾ ಉತ್ಸವ ಜರುಗಲಿದೆ ಎಂದರು
ಫೆ. 12 ರ ಬೆಳಗ್ಗೆ 9 ಗಂಟೆಗೆ ದುರದುಂಡೀಶ್ವರ ಮಠದ ಶ್ರೀ. ನೀಲಕಂಠ ಸ್ವಾಮಿಜಿ ಅವರಿಂದ ಷಟ್‌ಸ್ಥಲ ಧ್ವಜಾರೋಹಣ ನಡೆಯಲಿದ್ದು ಶ್ರೀ ನಿಜಗುಣ ಶಿವಯೋಗಿ ಸ್ವಾಮಿಜಿ ಸಾನಿಧ್ಯವನ್ನು ವಹಿಸುವರು, ಸಂಜೆ 6 30 ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಜಾತ್ರಾ ಮಹೋತ್ಸವ ಉದ್ಘಾಟಿಸಲಿದ್ದು ಮೂರ ಸಾವಿರ ಮಠದ ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮಿಜಿಗೆ ಗುರುವಂದನೆ ನಡೆಯಲಿದೆ.
ವಿಜಯ ಮಹಾಂತೇಶ್ವರ ಮಠದ ಶ್ರೀ ಗುರುಮಹಾಂತ ಸ್ವಾಮಿಜಿ ಸಾನಿಧ್ಯ ವಹಿಸಲಿದ್ದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸಭಾಪತಿ ಬಸವರಾಜ ಹೊರಟ್ಟಿ, ಶಾಸಕಿ ಶ್ರೀಮತಿ ಲಕ್ಷ್ಮೀ ಹೆಬ್ಬಾಳಕರ, ಅತಿಥಿಯಾಗಿ ಪಾಲ್ಗೊಳ್ಳುವರು.
ಜಿಲ್ಲಾಧಿಕಾರಿ ನಿತೀಶ ಪಾಟೀಲ ಹಾಗೂ ವಿರೇಶ ಅಂಚಟಗೇರಿ ಅವರನ್ನು ಸನ್ಮಾನಿಸಲಾಗುವುದು.ಫೆ 13 ರಂದು ಸಂಜೆ 6-30 ಕ್ಕೆ ಶ್ರೀ ಜಗದ್ಗುರು ಫಕೀರ ಸಿದ್ಧರಾಮ ಸ್ವಾಮಿಜಿ ಸಾನಿಧ್ಯದಲ್ಲಿ ಜಾತ್ರಾ ಮಹೋತ್ಸವ ವಿಶೇಷ ಉಪನ್ಯಾಸ ಮಾಲೆ-1 ನಡೆಯಲಿದ್ದು ವಿರೇಶ ಪಾಟೀಲ ಉಪನ್ಯಾಸ ನೀಡಲಿದ್ದಾರೆ. ಶಾಸಕರಾದ ಅರವಿಂದ ಬೆಲ್ಲದ, ಶ್ರೀಮತಿ ಕುಸುಮಾ ಎಸ್. ಶಿವಳ್ಳಿ, ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ, ಕೆ.ಎಲ್.ಇ. ಸಂಸ್ಥೆ ನಿರ್ದೇಶಕ ಶಂಕರಣ್ಣ ಮುನವಳ್ಳಿ ಅತಿಥಿಯಾಗಿ ಪಾಲ್ಗೊಳ್ಳುವರು.
ಶ್ರೀಮತಿ ಸವಿತಾ ಅಮರಶೆಟ್ಟಿ, ಡಾ. ವೀರಣ್ಣ ಬೋಳಿಶೆಟ್ಟಿ ಅವರನ್ನು ಸನ್ಮಾನಿಸಲಾಗುವುದು.ಫೆ. 14 ರ ಸಂಜೆ 6-30 ಕ್ಕೆ ಅಖಿಲ ಭಾರತ ಶಿವಾನುಭವ ಸಂಸ್ಥೆಯ 79 ನೇ ಸಮ್ಮೇಳನ ಜಾತ್ರಾ ಮಹೋತ್ಸವ ವಿಶೇಷ ಉಪನ್ಯಾಸ ಮಾಲೆ-2 ನಡೆಯಲಿದ್ದು ಸಿದ್ಧಸಂಸ್ಥಾನಮಠದ ಶ್ರೀ ಪಂಚಮ ಶಿವಲಿಂಗೇಶ್ವರ ಸ್ವಾಮಿಜಿ ಸಾನಿಧ್ಯದಲ್ಲಿ ಡಾ. ವಾಯ್. ಎಂ. ಯಾಕೋಳ್ಳಿ ಉಪನ್ಯಾಸ ನೀಡುವರು.
ಮುಖ್ಯಮಂತ್ರಿ ಕಾನೂನು ಸಲಹೆಗಾರ ಮೋಹನ ಲಿಂಬಿಕಾಯಿ, ಶಾಸಕರಾದ ಅಮೃತ ದೇಸಾಯಿ, ಶಂಕರ ಪಾಟೀಲ ಮುನೇನಕೊಪ್ಪ, VRL ಸಮೂಹ ಸಂಸ್ಥೆ ಅಧ್ಯಕ್ಷ ವಿಜಯ ಸಂಕೇಶ್ವರ, ಪ್ರಭುಲಿಂಗೇಶ್ವರ ಸಕ್ಕರೆ ಕಾರ್ಖಾನೆ ಚೇರಮನ್ ಜಗದೀಶ ಗುಡಗುಂಟಿಮಠ ಅತಿಥಿಯಾಗಿ ಪಾಲ್ಗೊಳ್ಳುವರು. ಕುಲಪತಿ ಡಾ. ಕೆ. ಬಿ. ಗುಡಿಸಿ, ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ ಹಾಗೂ ಮುಖ್ಯ ಇಂಜಿನಿಯರ್ ಶಂಕರಗೌಡ ಪಾಟೀಲ ಅವರನ್ನು ಸನ್ಮಾನಿಸಲಾಗುವುದು.
ಫೆ 15 ರ ಸಂಜೆ 6-30 ಕ್ಕೆ ಚಿತ್ರದುರ್ಗ ಬೃಹನ್ಮಠದ ಡಾ. ಶ್ರೀ ಶಿವಮೂರ್ತಿ ಮುರುಘಾ ಶರಣರು ಶ್ರೀ ಮೃತ್ಯುಂಜಯ-ಮಹಾಂತ ಪ್ರಶಸ್ತಿಯನ್ನು ತೋಂಟದಾರ್ಯ ಸಂಸ್ಥಾನಮಠದ ಡಾ. ಶ್ರೀ ತೋಂಟದ ಸಿದ್ಧರಾಮ ಸ್ವಾಮಿಜಿವರಿಗೆ ಪ್ರಧಾನ ಮಾಡಲಿದೆ. ಗೃಹ ಸಚಿವ ಬಸವರಾಜ ಬೊಮ್ಮಾಯಿ ಅತಿಥಿಯಾಗಿ ಪಾಲ್ಗೊಳ್ಳುವರು, ವಿಧಾನ ಪರಿಷತ್ ಮುಖ್ಯ ಸಚೇತಕ ಮಹಾಂತೇಶ ಎಂ. ಕವಟಗಿಮಠ ಅವರನ್ನು ಸನ್ಮಾನಿಸಲಾಗುವುದು.
ಫೆ. 16 ರ ಬೆಳಗ್ಗೆ 5 ಕ್ಕೆ ಶ್ರೀ ಗುರುಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಜಿ ಅವರಿಂದ ಲಿಂಗದೀಕ್ಷೆ ಸಮಾರಂಭ ನಡೆಯಲಿದೆ. ಸಂಜೆ 4 ಕ್ಕೆ ಚಿತ್ರದುರ್ಗ ಮುರುಘಾಮಠದ ಪೀಠಾಧ್ಯಕ್ಷರಾದ ಡಾ. ಶ್ರೀ ಶಿವಮೂರ್ತಿ ಮುರುಘಾ ಶರಣರ ಸಾನಿಧ್ಯದಲ್ಲಿ ಶ್ರೀಮದಥಣಿ ಮುರುಘೇಂದ್ರ ಮಹಾಶಿವ ಯೋಗಿಗಳ ರಥೋತ್ಸವವು ನೆರವೇರಲಿದ್ದು ನಾಡಿನ ವಿವಿಧ ಮಠಾಧೀಶರು ಪಾಳ್ಗೊಳ್ಳುವರು. ಈ ಪುಣ್ಯ ಕಾರ್ಯದಲ್ಲಿ ಸಕಲ ಸದ್ಭಕ್ತರು ಭಾಗವಹಿಸಿ ಉತ್ಸವವನ್ನು ಯಶಸ್ವಿಗೊಳಿಸಬೇಕೆಂದು ಕೋರಿದರು.
ಪತ್ರಿಕಾಗೋಷ್ಠಿಯಲ್ಲಿ ನಾಗರಾಜ ಪಟ್ಟಣಶೆಟ್ಟಿ. ಡಿ ಬಿ ಲಕಮನಹಳ್ಳಿ. ಬಸಯ್ಯಾ ಗಣಾಚಾರಿ. ಸಿ.ಎಸ್. ಪಾಟೀಲ.ವಿರುಪಾಕ್ಷಪ್ಪ ಕಟಗಿ. ಷಣಮುಖಪ್ಪ ಅಗಡಿ. ಎಸ್ ಎಸ್ ಲಕ್ಷ್ಮೇಶ್ವರ ಇದ್ದರು