ಧಾರವಾಡ –
ಪ್ರೇಮಿಗಳ ದಿನದಂದು ಪ್ರತಿ ವರುಷ ವಿಶೇಷವಾಗಿ ಕಾರ್ಯಕ್ರಮವೊಂದನ್ನು ಮಾಡಿಕೊಂಡು ಬರುತ್ತಿರುವ ಶ್ರೀರಾಮ ಸೇನಾ ಸಂಘಟನೆ ಈ ವರುಷವೂ ಕೂಡಾ ವಿಭಿನ್ನವಾದ ಕಾರ್ಯಕ್ರಮವನ್ನು ಸಂಘಟನೆಯ ವತಿಯಿಂದ ಮಾಡಲಾಯಿತು.

ಧಾರವಾಡದಲ್ಲಿ ಮಾತಾ ಪಾದ ಪೂಜೆಯನ್ನು ಮಾಡಲಾಯಿತು. ದುರ್ಗಾ ದೇವಿ ದೇವಸ್ಥಾನದಲ್ಲಿ ಪಾದ ಪೂಜೆಯನ್ನು ಮಾಡಲಾಯಿತು. ಹತ್ತಕ್ಕೂ ಹೆಚ್ಚು ತಾಯಿಯಂದಿರರನ್ನು ಆಹ್ವಾನ ಮಾಡಿ ಸಾಮೂಹಿಕವಾಗಿ ದೇವಸ್ಥಾನದಲ್ಲಿ ಪಾದ ಪೂಜೆಯನ್ನು ಮಾಡಿ ಆಶಿರ್ವಾದವನ್ನು ಪಡೆದುಕೊಂಡರು.

ಇನ್ನೂ ನಂತರ ನಗರದ ವಿವಿಧ ಪಾರ್ಕ್ ಸೇರಿದಂತೆ ವಿವಿಧ ಕಡೆಗಳಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಸಂಘಟನೆಯ ಸದಸ್ಯರು ಮುಖಂಡರು ಮಾಡಿದರು.

ಈ ಒಂದು ಸಮಯದಲ್ಲಿ ಶ್ರೀರಾಮ ಸಂಘಟನೆಯ ಮುಖಂಡರಾದ ಮಂಜು ಕಾಟಕರ್, ಅಣ್ಣಪ್ಪ ದೇವಟಗಿ, ರಾಜು ಗಾಡಗೋಳಿ, ವಿಜಯ ದೇವರಮನಿ, ಬುದ್ಧು ಪಾಟೀಲ್, ಮೈಲಾರ ಗುಡ್ಡಪ್ಪನವರ, ರಾಮದಾಸ್ ದವಳಿ , ವಿಶ್ವಾಸ ಸೇರಿದಂತೆ ಶ್ರೀ ರಾಮ ಸೇನೆ ಕಾರ್ಯಕರ್ತರು ಭಾಗವಹಿಸಿದ್ದರು
