ಬೆಳಗಾವಿ –
ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಇದ್ದುಕೊಂಡು ಧಾರವಾಡದ ಯುವತಿಯೊಬ್ಬರಿಗೆ ಪೊನ್ ಕರೆ ಮಾಡಿ ಬೆದರಿಕೆ ಹಾಕಿದ ತೌಸಿಫ್ ನ ಪ್ರಕರಣದ ಬೆನ್ನಲ್ಲೇ ಬೆಳಗಾವಿಯ ಪೊಲೀಸರು ಎಚ್ಚೆತ್ತು ಕೊಂಡಿದ್ದಾರೆ.ಪೊನ್ ಮಾಡಿದ ನಂತರ ಇಲ್ಲಿನ ಹಿಂಡಲಗಾ ಕೇಂದ್ರ ಕಾರಾಗೃಹದ ಮೇಲೆ ಪೊಲೀಸ್ ಅಧಿಕಾರಿಗಳು ದಾಳಿ ಮಾಡಿದ್ದಾರೆ. ನೂರಕ್ಕೂ ಹೆಚ್ಚು ಪೊಲೀಸರು ಕಾರ್ಯಾಚರಣೆ ನಡೆಸಿ ಜೈಲಿನಲ್ಲಿ ಸರ್ಚಿಂಗ್ ಮಾಡಿದ್ದಾರೆ

ಇಬ್ಬರು ಡಿಸಿಪಿಗಳು, ಎಸಿಪಿಗಳು, ಎಂಟು ಇನ್ಸ್ಪೆಕ್ಟರ್ ಹಾಗೂ ಪಿಎಸ್‌ಐಗಳು ಮತ್ತು 55 ಸಿಬ್ಬಂದಿ ಒಳಗೊಂಡ ತಂಡ ಪೊಲೀಸರ ತಂಡ ದಾಳಿ ಮಾಡಿದೆ.ವಿಶೇಷ ಪರಿಶೀಲನೆ ಮಾಡಿ ಕಾರ್ಯಾಚರಣೆ ಕೈಗೊಂಡಿತು. ಫ್ರೂಟ್ ಇರ್ಫಾನ್ ಕೊಲೆ ಪ್ರಕರಣದಲ್ಲಿ ಧಾರವಾಡದ ತೌಸಿಫ್ ಧಾರವಾಡದ ಸ್ನೇಹಾ ದೇಸಾಯಿ ಎಂಬುವರಿಗೆ ಪೊನ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದನು.ಈ ಒಂದು ಘಟನೆ ಯಿಂದ ಎಚ್ಚೆತ್ತುಕೊಂಡ ಪೊಲೀಸರು ದಾಳಿ ಮಾಡಿದ್ದಾರೆ. ಒಂದೂವರೆ ಘಂಟೆಗಳ ಕಾಲ ಜೈಲ್ ನಲ್ಲಿ ಪರಿಶೀಲನೆ ಮಾಡಿ ಈ ವೇಳೆ ಮೊಬೈಲ್ ಫೋನ್ ದೊರೆತಿದೆ. ಆ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ’ ಎಂದು ಡಿಸಿಪಿ ವಿಕ್ರಂ ಅಮಟೆ ಹೇಳಿದ್ದಾರೆ.
