ಧಾರವಾಡ –
ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಮೂವರು ಯುವಕರು ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಧಾರವಾಡ ತಾಲ್ಲೂಕಿನ ಕಲ್ಲಾಪೂರ ಗ್ರಾಮದಲ್ಲಿ ನಡೆದಿದೆ. ಗ್ರಾಮದಲ್ಲಿ ಒಂದು ಕಡೆ ನಾಗರಾಜ ಛಬ್ಬಿಯವರು ಶಿವಾಜಿ ಜಯಂತಿ ಕಾರ್ಯಕ್ರಮ ಮತ್ತು ರಸಮಂಜರಿ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿತ್ತು.ಈ ಒಂದು ಕಾರ್ಯಕ್ರಮ ನೋಡಲು ಹೋಗಿ ಮರಳಿ ಮನೆಯತ್ತ ಹೊರಟಿದ್ದ ಬಾಲಕಿಯ ಮೇಲೆ ಈ ಒಂದು ಕೃತ್ಯ ನಡೆದಿದೆ.
ಇನ್ನೂ ಗ್ರಾಮದಲ್ಲಿನ ರಸಮಂಜರಿ ಈ ಒಂದು ಕಾರ್ಯಕ್ರಮ ನೋಡಲು ತಂದೆಗೆ ಊಟಕ್ಕೆ ಕೊಟ್ಟು ಸ್ವಲ ಸಮಯ ಕಾರ್ಯಕ್ರಮ ನೋಡಿ ಮರಳಿ ಮನೆಗೆ ಬರುವಾಗ ಮೂವರು ಯುವಕರು ಮನೆಗೆ ಹೊರಟಿದ್ದ ಬಾಲಕಿಯನ್ನು ಮನೆಯೊಂದರಲ್ಲಿ ಎಳೆದುಕೊಂಡು ಹೋಗಿದ್ದಾರೆ.
ಅತ್ಯಾಚಾರಕ್ಕೆ ಯತ್ನಿಸಿ ಮಾನ ಭಂಗ ಮಾಡಿದ್ದಾ ರಂತೆ. ಬಾಲಕಿ ಚಿರಾಡುವ ಧ್ವನಿ ಕೇಳಿದ ಗ್ರಾಮಸ್ಥರು ಕೂಡಲೇ ಹೋಗಿ ಬಾಲಕರಿಗೆ ಬೈದು ಬುದ್ದಿ ಹೇಳಿ ಕಳುಹಿಸಿಕೊಟ್ಟಿದ್ದಾರೆ. ಇನ್ನೂ ಇತ್ತ ಬಾಲಕಿಯ ಪೊಷಕರು ಧಾರವಾಡ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರು ದಾಖಲಾಗುತ್ತಿದ್ದಂತೆ ಮಹಿಳಾ ಪೊಲೀಸ್ ಠಾಣೆಯುವರು ಮಂಜು,ಸುನೀಲ,ಫಕೀರ ಮೂವರನ್ನು ಬಂಧನ ಮಾಡಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.ಇತ್ತ ಈ ಒಂದು ಘಟನೆಯಿಂದ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ಈಗಾಗಲೇ ಮೂವರನ್ನು ವಶಕ್ಕೆ ತೆಗೆದುಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.