ಹುಬ್ಬಳ್ಳಿ –
ಮೊಟ್ಟೆ ತುಂಬಿಕೊಂಡು ರಸ್ತೆಯ ಪಕ್ಕದಲ್ಲಿ ನಿಂತುಕೊಂಡಿದ್ದ ಕಂಟೇನರ್ ಗೆ ಮ್ಯಾಂಗನೀಸ್ ತುಂಬಿದ ಲಾರಿಯೊಂದು ಡಿಕ್ಕಿಯಾದ ಘಟನೆ ಹುಬ್ಬಳ್ಳಿಯ ಗದಗ ರಸ್ತೆಯಲ್ಲಿ ನಡೆದಿದೆ.
ಗದಗ ರಸ್ತೆಯಲ್ಲಿನ ಐಟಿಸಿ ಕಾರ್ಖಾನೆ ಬಳಿ ಈ ಒಂದು ಅಪಘಾತ ನಡೆದಿದೆ. ಕಾರ್ಖಾನೆಯ ಬಳಿ ಗದಗ ನಿಂದ ಕುಮಟಾ ಗೆ ಮೊಟ್ಟೆ ಯನ್ನು ತುಂಬಿಕೊಂಡು ಕಂಟೇನರ್ ಹೊರಟಿತ್ತು ರಸ್ತೆಯ ಪಕ್ಕದಲ್ಲಿ ಪಾರ್ಕ್ ಮಾಡಿದ್ದರು.
ಇನ್ನೂ ಕೊಪ್ಪಳ ದಿಂದ ಗೋವಾ ಗೆ ಮ್ಯಾಂಗನೀಸ್ ತುಂಬಿಕೊಂಡು ಲಾರಿ ಹೊರಟಿತ್ತು .ರಸ್ತೆಯ ಪಕ್ಕದಲ್ಲಿ ನಿಂತುಕೊಂಡಿದ್ದ ಕಂಟೇನರ್ ಗೆ ಲಾರಿ ಡಿಕ್ಕಿಯಾಗಿದೆ ಡಿಕ್ಕಿಯ ರಭಸಕ್ಕೆ ಕಂಟೇನರ್ ನಲ್ಲಿದ್ದ ಎಲ್ಲಾ ಮೊಟ್ಟೆಗಳು ರಸ್ತೆ ತುಂಬೆಲ್ಲಾ ಬಿದ್ದಿದ್ದು
ಲಕ್ಷಾಂತರ ರೂಪಾಯಿ ಮೌಲ್ಯದ ಮೊಟ್ಟೆ ಗಳು ಹಾಳಾಗಿದ್ದು ರಸ್ತೆಯಲ್ಲಿ ಎಲ್ಲೆಂದರಲ್ಲಿ ಬಿದ್ದ ಮೊಟ್ಟೆ ಗಳನ್ನು ತಗೆದುಕೊಳ್ಳಲು ನಾ ಮುಂದು ನೀ ಮುಂದು ಎಂದು ಜನತೆ ಆಯ್ದುಕೊಳ್ಳಲು ಮುಗಿಬಿದ್ದಿದ್ದು ಕಂಡು ಬಂದಿತು.
ಇನ್ನೂ ವಿಷಯ ತಿಳಿದ ಹುಬ್ಬಳ್ಳಿಯ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಆಗಮಿಸಿ ಮಾಹಿತಿಯನ್ನು ಪಡೆದುಕೊಂಡು ಮುಂದಿನ ಕ್ರಮವನ್ನು ಕೈಗೊಂಡಿ ದ್ದಾರೆ.