ಧಾರವಾಡ –
ಹತ್ತಿ ತುಂಬಿಕೊಂಡು ಹೊರಟಿದ್ದ ಲಾರಿಯೊಂದಕ್ಕೆ ಬೆಂಕಿ ಹತ್ತಿಕೊಂಡ ಘಟನೆ ಧಾರವಾಡದ ಹೊಸ ಎಪಿಎಮ್ ಸಿ ಯಲ್ಲಿ ನಡೆದಿದೆ.

ಸವದತ್ತಿಯಿಂದ ಬೆಲೂರ ಕಡೆಗೆ ಹೊರಟಿದ್ದ ಲಾರಿಗೆ ವಿದ್ಯುತ್ ತಂತಿ ಸ್ಪರ್ಶಿಸಿ ಬೆಂಕಿ ಹತ್ತಿಕೊಂಡಿತು. ಬೆಂಕಿ ಹತ್ತಿಕೊಂಡು ಲಾರಿ ಹಾಗೇ ಹೊರಟಿತ್ತು ಬೆಂಕಿಯನ್ನು ನೋಡಿದ ಸಾರ್ವಜನಿಕರಿಗೆ ಚಾಲಕನ ಗಮನಕ್ಕೆ ತಗೆದುಕೊಂಡು ಬಂದಿದ್ದಾರೆ.

ಕೂಡಲೇ ಚಾಲಕ ಲಾರಿಯನ್ನು ನಿಲ್ಲಿಸಿ ಅಕ್ಕ ಪಕ್ಕದಲ್ಲಿನ ಅಂಗಡಿಗಳಲ್ಲಿನ ನೀರನ್ನು ಸಾರ್ವಜನಿಕರು ತಗೆದುಕೊಂಡು ಬಂದಿದ್ದಾರೆ. ಕೂಡಲೇ ನೀರನ್ನು ಹಾಕಿ ಬೆಂಕಿಯನ್ನು ನಂದಿಸಿದ್ದಾರೆ.
ಸಾರ್ವಜನಿಕರು ಚಾಲಕನ ಗಮನಕ್ಕೆ ತಗೆದುಕೊಂಡ ಬರದಿದ್ದರೆ ಲಾರಿ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗುತ್ತಿತ್ತು ಸಾರ್ವಜನಿಕರ ಕಾಳಜಿಯಿಂದ ಲಾರಿ ಚಾಲಕನ ಸಮಯ ಪ್ರಜ್ಞೆಯಿಂದ ಚಿಕ್ಕ ಪ್ರಮಾಣದಲ್ಲಿ ಹತ್ತಿಕೊಂಡಿದ್ದ ಬೆಂಕಿಯನ್ನು ನಂದಿಸಿದರು.

ಬೆಂಕಿಯನ್ನು ನಂದಿಸಿದ ಚಾಲಕ ಮತ್ತೆ ಲಾರಿಯನ್ನು ತಗೆದುಕೊಂಡು ಬೆಲೂರಿನ ಕಡೆಗೆ ಪ್ರಯಾಣವನ್ನು ಬೆಳಿಸಿದರು.