ನೇಸರಗಿ –
ವರ್ಗಾವಣೆಗೊಂಡ ಶಿಕ್ಷಕನಿಗೆ ಬೀಳ್ಕೊಡುಗೆ, ವರ್ಗಾವಣೆ ಯಾಗಿ ಬಂದ ಶಿಕ್ಷಕನಿಗೆ ಸ್ವಾಗತ ಹೌದು ಬೆಳಗಾವಿ ಜಿಲ್ಲೆಯ ನೇಸರಗಿ ಗಜಮಿನಾಳ ಸರ್ಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಇಂಥದೊಂದು ಕಾರ್ಯಕ್ರಮ ನಡೆಯಿತು.20 ವರ್ಷ ಕಾರ್ಯನಿರ್ವಹಿಸಿದ ಶಿಕ್ಷಕ ಐ.ಎಸ್ ಗಡದವರ ಹಾಗೂ 11 ವರ್ಷಗಳಿಂದಿದ್ದ ಜಿ.ಐ. ದಾರಪ್ಪನ ವರ ಅವರು ದೇಶನೂರ ಶಾಲೆಗೆ ವರ್ಗಾವಣೆಯಾದ ಪ್ರಯುಕ್ತ ಸನ್ಮಾನಿಸಿ ಬೀಳ್ಕೊಡಲಾಯಿತು.ಇದೇ ವೇಳೆ ಹಣಬರಹಟ್ಟಿ ಶಾಲೆಯಿಂದ ವರ್ಗಾವಣೆಯಾಗಿ ಬಂದ ಶಿಕ್ಷಕ ಎ.ಎಸ್. ಉಳಿವಿ ಅವರನ್ನು ಶಾಲೆಗೆ ಆತ್ಮೀಯ ವಾಗಿ ಸ್ವಾಗತಿಸಿಕೊಳ್ಳಲಾಯಿತು.
ಈ ಒಂದು ಸಮಯದಲ್ಲಿ ಮುಖ್ಯಶಿಕ್ಷಕ ಎಂ.ಎಲ್. ಮಾರಿ ಹಾಳ,ಹಣಬರಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಚಿರು ವಾರಿ,ಅಡುಗೆ ಸಿಬ್ಬಂದಿ, ಅಂಗನ ವಾಡಿ ಶಿಕ್ಷಕಿಯರು,ಗ್ರಾಮಸ್ಥರು ಸೇರಿದಂತೆ ಹಲವರು ಈ ಒಂದು ಸಮಯದಲ್ಲಿ ಉಪಸ್ಥಿತರಿದ್ದರು.ಶಿಕ್ಷಕ ಎಸ್.ಎ. ನಲವಡೆ ಸ್ವಾಗತಿಸಿದರು. ಶಿಕ್ಷಕ ಯು.ಎಸ್. ಹುಡೇದ ವಂದಿಸಿದರು.