ಧಾರವಾಡ –
ಸಾಮಾನ್ಯವಾಗಿ ಬದಲಾದ ಇಂದಿನ ಒತ್ತಡದ ಜೀವನದ ನಡುವೆ ಯಾವುದಕ್ಕೂ ಸಮಯವಿಲ್ಲದಂತಾಗಿದೆ ನಮ್ಮ ಜೀವನ ಶೈಲಿ.ದಿನ ಬೆಳಗಾದರೆ ಸಾಕು ಕೆಲಸ ಮಾಡಿ ಮನೆಗೆ ಹೊಗೊದು ದೊಡ್ಡ ಹರಸಾಹಸದ ಮಾತಾಗಿದೆ. ಬಿಡುವಿಲ್ಲದ ಸಿಕ್ಕಾಪಟ್ಟಿ ಕೆಲಸ ಒತ್ತಡದ ನಡುವೆ ನಾವಾ ಯಿತು ನಮ್ಮ ಕೆಲಸವಾಯಿತು ಎನ್ನುವ ಮಾತಿನ ನಡುವೆ ಧಾರವಾಡದ ಕೆಸಿಡಿ ಕಾಲೇಜಿನಲ್ಲಿ ಅರ್ಥಪೂರ್ಣವಾದ ಕಾರ್ಯಕ್ರಮವೊಂದು ಕಂಡು ಬಂದಿತು.

ಹೌದು ಹದಿನೈದು ವರ್ಷಗಳ ಹಿಂದೆ ಕಾಲೇಜಿನಲ್ಲಿ ಒಂದೇ ರೂಮ್ ನಲ್ಲಿ ಕುಳಿತುಕೊಂಡ ಕಲಿತವರೆಲ್ಲರೂ ಇಂದು ರಾಜ್ಯ ಸೇರಿದಂತೆ ಎಲ್ಲೇಂದರಲ್ಲಿ ಕೆಲಸವನ್ನು ಮಾಡುತ್ತಿ ದ್ದಾರೆ.ಅಂದು ಕೂಡಿ ಕಲಿತವರೆಲ್ಲರೂ ಇಂದು ದಿಕ್ಕಾಪಾ ಲಾಗಿ ಕೆಲಸವನ್ನು ಮಾಡುತ್ತಿದ್ದರು ಕೂಡಾ ಇದರಲ್ಲಿ ಕೆಲವರು ಸಂಪರ್ಕವನ್ನು ಇಟ್ಟುಕೊಂಡಿದ್ದರೆ ಇನ್ನೂಳಿದ ವರು ಯಾರ ಸಂಪರ್ಕವಿಲ್ಲದೇ ಕೆಲಸ ಎನ್ನುತ್ತಾ ದೂರದಲ್ಲಿ ದ್ದಾರೆ.

ಇದರ ನಡುವೆ ಕಲಿತ ಗೆಳೆಯರೆಲ್ಲರನ್ನು ಒಂದೇಡೆ ಸೇರಿ ಸಬೇಕು ಹಾಗೇ ಕಲಿಸಿದ ಗುರುವಿಗೆ ಗೌರವ ಸಲ್ಲಿಸಬೇ ಕೆಂಬ ಉದ್ದೇಶದಿಂದ ಗುರುನಮನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.ಒಂದೇಡೆ ಸೇರಿದ ಗೆಳೆಯರೆಲ್ಲರೂ ಕೂಡಿಕೊಂಡು ಅರ್ಥಪೂರ್ಣವಾದ ಸ್ನೇಹಿತರ ಸಮಾಗಮ ಕಾರ್ಯಕ್ರಮವನ್ನು ಮಾಡಿದರು.


ಮೊದಲು ಸಧ್ಯ ಕೆಸಿಡಿ ಕಾಲೇಜಿನ ಪ್ರಾಚಾರ್ಯರಾಗಿರುವ ಕರಡೋನಿ ಅವರಿಗೆ ಸನ್ಮಾನ ಮಾಡಿ ಗೌರವಿಸಿದರು. ನಂತರ ಕಲಿಸಿದ ನಿವೃತ್ತ ಇತಿಹಾಸ ಉಪನ್ಯಾಸಕರು ಶ್ರೀಶೈಲಪ್ಪ ಅವರಿಗೂ ಕೂಡಾ ಪ್ರೀತಿಯಿಂದ ಸನ್ಮಾನಿಸಿ ಗೌರವಿಸಿದರು.ಇದರೊಂದಿಗೆ ಗೆಳೆಯರೆಲ್ಲರೂ ಕೂಡಿ ಕೊಂಡು ಹದಿನೈದು ವರ್ಷಗಳ ನಂತರ ಈ ಒಂದು ಅರ್ಥಪೂರ್ಣವಾದ ಕಾರ್ಯಕ್ರಮದೊಂದಿಗೆ ಗುರು ನಮನ ಮಾಡಿದರು.

ಇದರೊಂದಿಗೆ ವೇದಿಕೆಯ ಕಾರ್ಯಕ್ರಮವನ್ನು ಮಾಡಿ ಸಮಾಜದ ಬೇರೆ ಬೇರೆ ಇಲಾಖೆಗಳಲ್ಲಿ ವೃತ್ತಿಯನ್ನು ಮಾಡಿತ್ತಿರುವ ಎಲ್ಲರೂ ಅನುಭವವನ್ನು ಹಂಚಿಕೊಂಡರು. ರಾಜ್ಯದ ಮೂಲೆ ಮೂಲೆಗಳಿಂದ ಅದರಲ್ಲೂ ವಿಶೇಷವಾಗಿ ಗೋವಾ ರಾಜ್ಯದಿಂದಲೂ ಈ ಒಂದು ಕಾರ್ಯಕ್ರಮಕ್ಕೆ ಆಗಮಿಸಿದ್ದರು.ಕಾರ್ಯಕ್ರಮದಲ್ಲಿ ಪ್ರಮುಖವಾಗಿ ಮಲ್ಲಿಕಾರ್ಜುನ ಪಾಟೀಲ,ಶರಣು ಅಂಗಡಿ,ಶಿವರುದ್ರಪ್ಪ ಮೇಟಿ,ಪ್ರತಿಭಾ ಪಾಟೀಲ,ವೆಂಕಟೇಶ ಲಮಾಣಿ,ಬಸಯ್ಯ ನಿರೂಪಕ ಅರುಣ ಬಡಿಗೇರ,ನೀಲಕಂಠಗೌಡ, ಹನು ಮಂತಗೌಡ,ಲಿಂಗನಗೌಡ,ವಿರೇಶ ಹಸಬಿ,ಸೇರಿದಂತೆ ಹಲವರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಶ್ವಿ ಗೊಳಿಸಿ ಸ್ನೇಹಿತರ ಸಮಾಗಮಕ್ಕೆ ಸಾಕ್ಷಿಯಾಗಿ ಹದಿನೈದು ವರ್ಷಗಳ ಸೇರಿದ ಬಳಗಕ್ಕೆ ಬೇಸುಗೆಯಾದರು

ಪೊನ್ ನಂಬರ್ ಹಾಕಿಕೊಂಡು ದೊಸ್ತ್ ಹೇಗೆ ಇದ್ದೀಯಾ ಹಲೋ ನಮಸ್ಕಾರ ರೀ ಪಾ ಏನೋ ನೀನು ಈಗ ಕೇಂದ್ರ ಸಚಿವರ……ನಿನೇನು ಆಂಕರ್ ಆಗಿದ್ದಿಯಾ…..ದೊಸ್ತ ನಮ್ಮ ಪರಿಚಯದವರ ಗಾಡಿ ಧಾರವಾಡದಾಗ ಯಾರಾದ ರೂ ಹಿಡಿದರ ಹೇಳಪಾ…..ನಮಸ್ಕಾರ ರೀ ಅಂಗಡಿಯವರ ಹೀಗೆ ಹತ್ತು ಹಲವಾರು ಪ್ರೀತಿಯ ಮಾತುಗಳನ್ನುಹೇಳುತ್ತಾ ಕೇಳುತ್ತಾ ಇಡೀ ದಿನ ಸಂಭ್ರಮಿಸಿ ಮತ್ತೊಮ್ಮೆ ಎಲ್ಲರೂ ಸೇರೊಣಾ ಎನ್ನುತ್ತಾ ಹದಿನೈದು ವರ್ಷಗಳ ಸವಿ ನೆನಪು ಗಳೊಂದಿಗೆ ಕೆಸಿಡಿ ಕಾಲೇಜಿನಲ್ಲಿನ ದೊಸ್ತರ ಸಮಾಗಮ ಮುಗಿಸಿಕೊಂಡು ನಗು ನಗುತ್ತಾ ತೆರಳಿದರು