ಚಿಕ್ಕಮಗಳೂರು –
ಏಕಾಏಕಿ ರಸ್ತೆಗೆ ಅಡ್ಡಲಾಗಿ ವಿದ್ಯುತ್ ಕಂಬ ಬಿದ್ದು ಚಿಕ್ಕಮಗಳೂರು ತಾಲೂಕಿನ ಕಣಿವೆ-ದಾಸರಹಳ್ಳಿ ಬಳಿ ಭೀಕರ ಸರಣಿ ಅಪಘಾತ ಸಂಭವಿಸಿದೆ ಹೌದು ವಿದ್ಯುತ್ ಕಂಬ ಬಿದ್ದ ಈ ಸರಣಿ ಅಪಘಾ ತದಲ್ಲಿ ಟಾಟಾ ಏಸ್ ವಾಹನ ಮತ್ತು ಸರ್ಕಾರಿ ಬಸ್ ಹಾಗೂ ಕಾರು ಜಖಂಗೊಂಡಿವೆ.
ಟಾಟಾ ಏಸ್‌ನಲ್ಲಿದ್ದ 20ಕ್ಕೂ ಹೆಚ್ಚು ವಿದ್ಯಾರ್ಥಿ ಗಳಿಗೆ ಗಂಭೀರ ಗಾಯಗಳಾಗಿವೆ.ಈ ಮಕ್ಕಳು ಚಿಕ್ಕಮಗಳೂರು ಹಬ್ಬಕ್ಕೆ ಬಂದಿದ್ರು ಖುಷಿಯಾಗಿ ಹಬ್ಬ ಮುಗಿಸಿ ವಾಪಸ್ ತೆರಳುತ್ತಿದ್ದಾಗ ಈ ಅವಘಡ ನಡೆದಿದೆ.ವಿದ್ಯಾರ್ಥಿಗಳು ಸಖರಾಯ ಪಟ್ಟಣದ ಜಿಗಣೆಹಳ್ಳಿ ಸರ್ಕಾರಿ ಶಾಲೆಯವರಾ ಗಿದ್ದಾರೆ.ಗಾಯಗೊಂಡ ವಿದ್ಯಾರ್ಥಿಗಳನ್ನ ಮಲ್ಲೇಗೌಡ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡ ಲಾಗಿದೆ.ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಚಿಕ್ಕಮಗಳೂರು.