ಹುಬ್ಬಳ್ಳಿ –
ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತ್ರತ್ವದಲ್ಲಿನ ಸಚಿವ ಸಂಪುಟಕ್ಕೆ ಸೇರಲು ತೆರೆ ಮರೆಯಲ್ಲಿ ಶಾಸಕರು ಬಿಡುವಿಲ್ಲದೇ ಸರ್ಕಸ್ ಮಾಡ್ತಾ ಇದ್ದಾರೆ.ಇದಕ್ಕೆ ಹುಬ್ಬಳ್ಳಿ ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಕೂಡಾ ಹೊರತಾಗಿಲ್ಲ

ಒಂದು ಕಡೆ ಶಾಸಕರು ದೆಹಲಿ ಯಲ್ಲಿ ಠಿಕಾಣೆ ಹೂಡಿದ್ದರೆ ಇನ್ನೂ ಇತ್ತ ಇವರ ಅಭಿಮಾನಿಗಳು ಕೂಡಾ ತಮ್ಮ ತಮ್ಮ ಶಾಸಕರಿಗೆ ಸಚಿವ ಸ್ಥಾನ ನೀಡುವಂತೆಯೂ ಕೂಡಾ ಒತ್ತಡವನ್ನು ಹಾಕುತ್ತಿದ್ದಾರೆ

ಹೌದು ಇತ್ತ ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನ ಸಭಾ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯ ಕೇಳಿ ಬಂದಿದ್ದು
ಅವರ ಅಭಿಮಾನಿಗಳು ಸಚಿವ ಸ್ಥಾನ ಸಿಗಲೆಂದು ಹುಬ್ಬಳ್ಳಿಯಲ್ಲಿ ಹೆಚ್ಚಿನ ಲಾಭಿಯನ್ನು ಮಾಡುತ್ತಿದ್ದು ಶಾಸಕ ಅರವಿಂದ ಬೆಲ್ಲದ ಅಭಿಮಾನಿಗಳಿಂದ ನಗರದಲ್ಲಿ ದೀಡ ನಮಸ್ಕಾರವನ್ನು ಹಾಕಿದರು

ಹೌದು ನಗರದ ಹುಬ್ಬಳ್ಳಿಯ ಸಿದ್ಧಾರೂಢ ಮಠದಲ್ಲಿ ದೀಡ ನಮಸ್ಕಾರವನ್ನು ಅರವಿಂದ ಬೆಲ್ಲದ ಅಭಿಮಾ ನಿಗಳು ಹಾಕಿ ಸಚಿವ ಸ್ಥಾನಕ್ಕಾಗಿ ದೇವರಲ್ಲಿ ಪ್ರಾರ್ಥಿಸಿದರು.
ಒಂದು ಕಡೆ ಶಾಸಕ ಅರವಿಂದ ಬೆಲ್ಲದ ಅವರ ಜನ್ಮದಿನ ಹಿನ್ನೆಲೆ ಸಿದ್ಧಾರೂಢ ಮಠದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಅಭಿಮಾನಿಗಳು ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯವನ್ನು ಮಾಡಿದರು.

ಬೆಲ್ಲದ ಅವರ ಪರ ಘೋಷಣೆ ಕೂಗಿ ಸರ್ಕಾರಕ್ಕೆ ಒತ್ತಾಯವನ್ನು ಅವರ ಅಭಿಮಾನಿಗಳು ಮಾಡಿದರು ಬೆಲ್ಲದ ಅಭಿಮಾನಿಗಳು ಹೆಚ್ಚಿನ ಪ್ರಮಾಣದಲ್ಲಿ ಸಿದ್ದಾರೂಢ ದೇವಸ್ಥಾನದಲ್ಲಿ ಸೇರಿ ಸಚಿವ ಸ್ಥಾನಕ್ಕೆ ಒತ್ತಾಯವನ್ನು ಮಾಡಿದರು