ಧಾರವಾಡ –
ಹೌದು ಕಳೆದ ಕೆಲ ದಿನಗಳಿಂದ ಒಂದಿಲ್ಲೊಂದು ಸಮಾಜ ಮುಖಿ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿರುವ ಧಾರವಾಡದ ಬಸವರಾಜ ಕೊರವರ ನೇತ್ರತ್ವದ ಜನ ಜಾಗೃತಿ ಸಂಘಟನೆಯ ಸಮಾಜ ಮುಖಿ ಕಾರ್ಯಕ್ರಮ ಗಳು ಧಾರವಾಡದಲ್ಲಿ ಮುಂದುವರೆದಿದ್ದು ಈಗಾಗಲೇ ಧಾರವಾಡ ನಗರ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಹತ್ತು ಹಲವಾರು ಸಮಾಜ ಮುಖಿ ಕಾರ್ಯಕ್ರಮಗಳನ್ನು ಬಸವರಾಜ ಕೊರವರ ನೇತ್ರತ್ವದಲ್ಲಿನ ಟೀಮ್ ಮಾಡಿ ಕೊಂಡು ಬರುತ್ತಿದೆ
ಸಧ್ಯ ಈಗಲೂ ಮುಂದುವರೆದಿದ್ದು ಈ ನಡುವೆ ಸಧ್ಯಶಿಕ್ಷ ಣವೇ ಶಕ್ತಿ ಎಂದುಕೊಂಡಿರುವ ಸಂಘಟನೆ ಮಾರಡಗಿ ಗ್ರಾಮದ ಪ್ರೌಢ ಮತ್ತು ಪ್ರಾಥಮಿಕ ಕನ್ನಡ ಮಾಧ್ಯಮ ಹಾಗು ಉರ್ದು ಶಾಲೆಯ 250 ಕ್ಕೊ ಅಧಿಕ ಮಕ್ಕಳಿಗೆ ನೋಟ್ ಪುಸ್ತಕಗಳನ್ನು ನೀಡಲಾಯಿತು.ಇದೇ ವೇಳೆ ಶಾಲೆಗಳ ಮೈದಾನಗಳಲ್ಲಿ 10 ಗಿಡಗಳನ್ನು ಹಚ್ಚಲಾಯಿತು ಆ ಗಿಡಗಳನ್ನು ಪೋಷಿಸಿ ಬೆಳೆಸುವ ಜವಾಬ್ದಾರಿಯನ್ನು ಮಕ್ಕಳಿಗೆ ನೀಡಿ ಗಿಡಮರಗಳನ್ನು ಬೆಳೆಸುವ ಹಾಗೂ ಗಿಡಮರಗಳಿಂದ ಆಗುವ ಲಾಭವನ್ನು ಕುರಿತು ಮಕ್ಕಳಲ್ಲಿ ಅರಿವು ಮೂಡಿಸಲಾಯಿತು
ಈಗಾಗಲೇ ಹೀಗೆ ಗ್ರಾಮೀಣ ಪ್ರದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಈ ಒಂದು ಸಂಘಟನೆ ಮಾಡಿಕೊಂಡು ಬರುತ್ತಿದ್ದು ಈಗಲೂ ಮುಂದುವರೆದಿದ್ದು ಮಾರಡಿಯ ಈ ಒಂದು ಕಾರ್ಯಕ್ರಮ ದಲ್ಲಿ ಗ್ರಾಮದ ಹಿರಿಯರಾದ ಗಂಗಾಧರ್ ಪಾಟೀಲ್
ಕುಲಕರ್ಣಿ,ಗುರುನಾಥ್ ಗೌಡ ಅಶೋಕ್ ಕಣಕೀ ಕೊಪ್ಪ ಮಾರಡಗಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಸದಸ್ಯರು ಗ್ರಾಮ ಪಂಚಾಯತಿಯ ಪಿಡಿಓ ಸೇರಿದಂತೆ ಅನೇಕ ಉತ್ಸಾಹಿ ಯುವಕರು ಪಾಲ್ಗೊಂಡ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.