ಧಾರವಾಡ –
ಯೋಗೀಶಗೌಡ ಹತ್ಯೆ ಪ್ರಕರಣದಲ್ಲಿ ಮತ್ತೆ ಸಿಬಿಐ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದ ಬಸವರಾಜ ಮುತ್ತಗಿ ಅವರ ಹೇಳಿಕೆ ಕುತೂಹಲ ಕೆರಳಿಸಿದೆ.ನಿನ್ನೆ ಮತ್ತೆ ವಿಚಾರಣೆಗೆ ಹಾಜರಾಗಿದ್ದ ಬಸವರಾಜ ಮತ್ತಗಿ ಸಂಜೆ ವಿಚಾರಣೆ ಮುಗಿಸಿ ಕೊಂಡು ಹೋಗುವ ಸಮಯದಲ್ಲಿ ಒಂದು ದಿನ ಕಾಯಿರಿ ನಾಳೆ ಮತ್ತಷ್ಟು ಹೇಳೊದು ಬಹಳ ಇದೆ ಎಂದಿದ್ದರು.ಈ ಒಂದು ಹೇಳಿಕೆ ಸಾಕಷ್ಟು ಪ್ರಮಾಣ ದಲ್ಲಿ ತೀವ್ರ ಕುತೂಹಲವನ್ನು ಮೂಡಿಸಿ ಕೇರಳಿಸಿದೆ.

ಬಸವರಾಜ ಮುತ್ತಗಿ ಅವರು ಯೋಗೀಶಗೌಡ ಹತ್ಯೆಯ ಪ್ರಮುಖ ಆರೋಪಿಯ ಸ್ಥಾನದಲ್ಲಿ ದ್ದಾರೆ.ಒಂದು ದಿನ ಕಾಯಿರಿ ನಾಳೆ ಬಹಳಷ್ಟು ವಿಷಯ ಚರ್ಚೆ ಮಾಡುವುದು ಇದೆ ಎನ್ನುತ್ತಾ ಮಾಧ್ಯಮಗಳ ಜೊತೆ ಚರ್ಚೆ ಮಾಡುವುದು ಇದೆ ಎಂದು ಹೇಳಿದ್ದರು.ಒಂದು ದಿನ ಕಾಯಿರಿ ಸಾಕಷ್ಟು ವಿಷಯಗಳು ಇವೆ ನಾನೂ ಕೂಡ ಓರ್ವ ವಕೀಲ ಆಗಿದ್ದವನು ಎಂದು ಹೇಳಿದ್ದ ಬಸವರಾಜ ಮುತ್ತಗಿ ಅವರ ಈ ಒಂದು ಮಾತುಗಳು ತೀವ್ರ ಚರ್ಚೆಗೆ ಗ್ರಾಸವಾಗಿದ್ದು ಇಂದು ಏನಾದರೂ ಮತ್ತೆ ಹೊಸ ಬಾಂಬ್ ಸಿಡಿಸುತ್ತಾರೆನಾ ಎಂಬುದನ್ನು ಕಾದು ನೋಡಬೇಕು.
ಹಾಗೇ ಇವರು ಯಾಕೇ ಹೀಗೆ ಹೇಳಿದರು ಅಲ್ಲದೇ ಈಗಾಗಲೇ ಕೇಸ್ ವಿಚಾರಣೆ ಹಂತದಲ್ಲಿದೆ ನಾನೂ ನಮ್ಮ ವಕೀಲರ ಜೊತೆ ಇಂದು ಮಾತನಾಡುವೆ ನಾಳೆ ಬಹಳ ವಿಷಯ ಮಾಧ್ಯಮಗಳ ಜೊತೆ ಚರ್ಚೆ ಮಾಡುವೆ ಸಿಬಿಐ ವಿಚಾರಣೆ ಪೂರ್ಣಗೊಳಿಸಿದ ಬಳಿಕ ಮಾತನಾಡಿದ ಮುತ್ತಗಿ ಅವರು ಇವತ್ತು ಏನು ಹೇಳ್ತಾರೆ ಎಂಬುದನ್ನು ಕಾದು ನೋಡಬೇಕಿದೆ.