ಹುಬ್ಬಳ್ಳಿ –
ನಿಮ್ಮ ಬಂಗಾರದ ಆಭರಣಗಳನ್ನು ಫಳ ಫಳ ಹೊಡೆಯುವಂತೆ ಮಾಡುತ್ತೆನೆ ನೋಡಿ ಹೇಗಿದೆ ಅಂತಾ ತೋರಿಸಿ ನಂತರ ಖದೀಮರು ಪಾಲಿಶ್ ಮಾಡಲು ಕೊಟ್ಟ ಬಂಗಾರವನ್ನು ಒಮ್ಮೆ ಪಾಲಿಶ್ ಮಾಡಿ ಕೊಟ್ಟ ನಂತರ ದೊಡ್ಡ ಪ್ರಮಾಣದಲ್ಲಿ ಬಂದ ಬಂಗಾರವನ್ನು ಕಿತ್ತುಕೊಂಡು ಹೋಗುತ್ತಾರೆ.ಹೀಗೆ ಕಳ್ಳತನ ಮಾಡಿಕೊಂಡು ಹೋಗಿರುವ ಪ್ರಕರಣಗಳು ಹುಬ್ಬಳ್ಳಿಯಲ್ಲಿ ನಡೆದಿವೆ.

ಒಂದೇ ದಿನದಲ್ಲಿ ನಗರ ಪ್ರದೇಶದಲ್ಲಿ ಒಂದು ಮತ್ತೊಂದು ಗ್ರಾಮೀಣ ಪ್ರದೇಶದಲ್ಲಿ ಒಂದು ಪ್ರಕರಣ ನಡೆದಿವೆ.

ಉಜಲಾ ಶೈನ್ ಪೌಡರ್ ನ ಹೆಸರಿನಲ್ಲಿ ನಿಮ್ಮ ಮನೆಯ ಮುಂದೆ ಬಂದು ಹೀಗೆ ಮಾಡಬಹುದು ಹುಷಾರಾಗಿರಿ.ಹುಬ್ಬಳ್ಳಿಯ ಹಳೇ ಹುಬ್ಬಳ್ಳಿಯಲ್ಲಿ ಖದೀಮರು ಒಂಬತ್ತು ತೊಲೆ ಬಂಗಾರವನ್ನು ಪಾಲಿಶ್ ಮಾಡಿಕೊಡುವ ನೆಪದಲ್ಲಿ ಹೀಗೆ ಬಂಗಾರವನ್ನು ಕಿತ್ತುಕೊಂಡು ಎಸ್ಕೇಪ್ ಆಗಿದ್ದಾರೆ.

ಹಳೆ ಹುಬ್ಬಳ್ಳಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ಬೆನ್ನಲ್ಲೇ ಇತ್ತ ಹುಬ್ಬಳ್ಳಿಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಈ ಕುರಿತು ಒಂದು ದೂರು ದಾಖಲಾಗಿದೆ.

ಒಂದು ಕಡೆ ಒಂಬತ್ತು ತೊಲೆ ಮತ್ತೊಂದು ಕಡೆ ವರೂರಿನಲ್ಲಿ 3 ತೊಲೆ ಬಂಗಾರವನ್ನು ಪಾಲಿಶ್ ನೆಪದಲ್ಲಿ ತಗೆದುಕೊಂಡು ತಗೆದುಕೊಂಡು ಹೋಗಿದ್ದಾರೆ.ಇನ್ನೂ ಎರಡು ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಪೊಲೀಸರು ಜಂಟಿ ಕಾರ್ಯಾಚರಣೆ ಆರಂಭ ಮಾಡಿ ಅಲ್ಲದೇ ಈ ಕುರಿತು ರೇಖಾ ಚಿತ್ರಗಳನ್ನು ಬಿಡುಗಡೆ ಮಾಡಿದ್ದಾರೆ.


ಸಧ್ಯ ಎರಡು ಪೊಲೀಸ್ ಠಾಣೆ ಅಧಿಕಾರಿಗಳು ಮಾತಾಡಿಕೊಂಡು ಜಂಟಿ ಕಾರ್ಯಾಚರಣೆ ಆರಂಭ ಮಾಡಿದ್ದಾರೆ. ಒಟ್ಟಾರೆ ಏನೇ ಆಗಲಿ ಉಜಾಲಾ ಕಂಪನಿಯ ಹೆಸರಿನಲ್ಲಿ ನಿಮ್ಮ ಮನೆಯ ಮುಂದೆ ಪಾಲಿಶ್ ಮಾಡಲು ಬಂದರೆ ಕೂಡಲೇ ಹತ್ತಿರದ ಪೊಲೀಸರಿಗೆ ಮಾಹಿತಿ ನೀವು ಹುಷಾರಾಗಿರಿ.