ಧಾರವಾಡ –
ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಸಾವಿಗೀಡಾದ ಘಟನೆ ಧಾರವಾಡದಲ್ಲಿ ನಡೆದಿದೆ ಹೌದು ಧಾರವಾಡ ಹೊರ ವಲಯದ ಪೂನಾ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.ಹೆದ್ದಾರಿಯ ಮಮ್ಮಿ ಗಟ್ಟಿ ಬಳಿ ಈ ಒಂದು ಅಪಘಾತ ನಡೆದಿದ್ದು ಸ್ಥಳದಲ್ಲೇ ಒಬ್ಬರು ಸಾವಿಗಾಡಿದರೆ ಇನ್ನೊಬ್ಬರು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯದಲ್ಲಿಯೇ ಮೃತರಾಗಿದ್ದಾರೆ.
ಬಸಯ್ಯ ಪೂಜಾರ ಎಂಬುವರು ತುಂಬಾ ವೇಗವಾಗಿ ಒಂದೇ ಬದಿಯ ರಸ್ತೆಯಲ್ಲಿ ಬಂದಿದ್ದು ಈ ಒಂದುಸಮಯ ದಲ್ಲಿ ಎದುರಿಗೆ ಬರುತ್ತಿದ್ದ ಮತ್ತೊಂದು ಬೈಕ್ ಗೆ ಡಿಕ್ಕಿ ಹೊಡೆದಿದ್ದಾರೆ.ಹೀಗಾಗಿ ಎದುರಿನ ಬೈಕ್ ನಲ್ಲಿದ್ದ ಪ್ರತೀಕ ಪ್ರಕಾಶ ಗೂಳಪ್ಪನವರ ಧಾರವಾಡದ ನಿವಾಸಿಯಾಗಿದ್ದು ತೀವ್ರವಾಗಿ ಗಾಯಗೊಂಡ ಇವನನ್ನು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು ಆದರೆ ತೀವ್ರವಾಗಿ ಗಾಯ ಗೊಂಡ ಇವನು ಚಿಕಿತ್ಸೆ ಫಲಿಸದೇ ಮೃತನಾಗಿದ್ದಾನೆ.
ಇನ್ನೂ ಸುದ್ದಿ ತಿಳಿದ ಗರಗ ಪೊಲೀಸರು ಸ್ಥಳಕ್ಕೇ ಆಗಮಿಸಿ ಪರಿಶೀಲನೆ ಮಾಡಿದರು.ಬಸಯ್ಯ ಬೈಲಹೊಂಗಲ ನಿವಾಸಿ ಯಾಗಿದ್ದು ಪ್ರತೀಕ ಧಾರವಾಡದ ನಿವಾಸಿಯಾಗಿದ್ದು ಈ ಕುರಿತಂತೆ ದೂರನ್ನು ದಾಖಲು ಮಾಡಿಕೊಂಡಿದ್ದುಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.
ಹೆದ್ದಾರಿಯಲ್ಲಿ ಬೈಕ್ ಸವಾರ ರಾಂಗ್ ಸೈಡ್ ಬಂದಿದ್ದೇ ಅಪಘಾತಕ್ಕೆ ಕಾರಣವಾಗಿದ್ದು ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ.