ಹುಬ್ಬಳ್ಳಿ –
ಧಾರವಾಡ ಜಿಲ್ಲೆಯಲ್ಲಿ ಪಾಸಿಟಿವಿಟಿ ಕಡಿಮೆ ಯಾದರೂ ಇನ್ನೂ ಕೂಡಾ ಲಾಕ್ ಡೌನ್ ನಿಂದಾಗಿ ಜಿಲ್ಲೆ ಮುಕ್ತಿ ಸಿಕ್ಕಿಲ್ಲ. ಜಿಲ್ಲೆಯಲ್ಲಿ ಪಾಸಿಟಿವಿಟಿ ಕಡಿಮೆ ಇದ್ದರೂ ಕೂಡಾ ಮುಖ್ಯಮಂತ್ರಿ ಘೋಷಣೆ ಯಂತೆ ನಾಳೆ ಜಿಲ್ಲೆ ಲಾಕ್ ಡೌನ್ ನಿಂದ ಮುಕ್ತವಾಗ ದೇ ಮತ್ತೆ ಈ ಹಿಂದೆ ಜೂನ್ 11 ರಂದು ಘೋಷಣೆ ಯಾದ ಆದೇಶವೇ ಮುಂದುವರೆಯಲಿದ್ದು ಜಿಲ್ಲೆ ಯಲ್ಲಿ ಪ್ರಕರಣಗಳು ಕಡಿಮೆಯಾಗಿದ್ದರೂ ಕೂಡಾ ಲಾಕ್ ಡೌನ್ ನಿಂದ ಮುಕ್ತ ನೀಡದಿರೊದಕ್ಕೆ ಹುಬ್ಬ ಳ್ಳಿಯಲ್ಲಿ ಚೇಂಬರ್ ಆಫ್ ಕಾಮರ್ಸ್ ಸಂಘಟನೆ ಯ ನೇತ್ರತ್ವದಲ್ಲಿ ಬಟ್ಟೆ,ಬಂಗಾರ, ಪಾತ್ರೆ, ಪ್ಲಾಯುಡ್ ಸೇರಿದಂತೆ ಐದಾರು ವ್ಯಾಪಾರಿಗಳ ಮತ್ತು ವರ್ತಕರು ಸಚಿವ ಜಗದೀಶ್ ಶೆಟ್ಟರ್ ಅವರ ಮನೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದರು.
ಜಿಲ್ಲೆಯಲ್ಲಿ ಸಧ್ಯ 4.1 ಪಾಸಿಟಿವಿಟಿ ಇದೆ ಹೀಗಿರು ವಾಗ ಈಗಾಗಲೇ ಜಿಲ್ಲೆಯಲ್ಲಿ ಲಾಕ್ ಡೌನ್ ನ್ನು ಸಡಿಲಿಕೆ ಮಾಡಿ ಏಕಾಎಕಿಯಾಗಿ ಹೀಗೆ ಮಾಡಿದ್ದಾರೆ ಯಾಕೇ ಹೀಗೆ ಈ ಕುರಿತಂತೆ ಮಾತನಾಡಿ ಜಿಲ್ಲೆ ಯನ್ನು ಲಾಕ್ ಡೌನ್ ನಿಂದ ಮುಕ್ತ ಮಾಡುವಂತೆ ಒತ್ತಾಯವನ್ನು ಮಾಡಿದರು.
ಇನ್ನೂ ಇದೇ ವೇಳೆ ಜಗದೀಶ್ ಶೆಟ್ಟರ್ ಮಾತನಾಡಿ ಈ ಒಂದು ವಿಚಾರ ಕುರಿತಂತೆ ಈಗಾಗಲೇ ಸರ್ಕಾರ ದ ಮುಖ್ಯ ಕಾರ್ಯದರ್ಶಿ ಅವರಿಗೆ ಮಾತನಾಡಿದ್ದು ಮುಖ್ಯಮಂತ್ರಿಯವರಿಗೂ ಮಾತನಾಡಿದ್ದೇನೆ ಸಂಜೆ ಯ ಒಳಗೆ ಸಮಸ್ಯೆಯನ್ನು ಸರಿ ಮಾಡಿ ಜಿಲ್ಲೆಯನ್ನು ಲಾಕ್ ಡೌನ್ ನಿಂದ ಮುಕ್ತ ಮಾಡೊದಾಗಿ ಹೇಳಿ ದರು.