ಧಾರವಾಡ –
ಆಶಾ ಕಾರ್ಯಕರ್ತೆಯರಿಗೆ ಆಹಾರ ಧಾನ್ಯಗಳ ಕಿಟ್ ಗಳನ್ನು ಧಾರವಾಡದಲ್ಲಿ ವಿತರಣೆ ಮಾಡಲಾಯಿತು.ಹೌದು ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಕ್ಷಯ ಪಾತ್ರಾ ಸಂಸ್ಥೆಯ ವತಿಯಿಂದ ಈ ಒಂದು ಆಹಾರದ ಕಿಟ್ ಗಳನ್ನು ವಿತರಣೆ ಮಾಡಲಾಯಿತು.

ಜಿಲ್ಲಾಧಿಕಾರಿ ನಿತೇಶ ಪಾಟೀಲ ಕಚೇರಿ ಸಭಾಂಗಣದಲ್ಲಿ ನೂರಾರು ಆಶಾ ಕಾರ್ಯಕರ್ತೆಯರಿಗೆ ಆಹಾರದ ಧಾನ್ಯ ಗಳ ಕಿಟ್ ಗಳನ್ನು ವಿತರಣೆ ಮಾಡಿದರು.ಅಕ್ಷಯಪಾತ್ರಾ ಸಂಸ್ಥೆಯು ಈ ಒಂದು ಆಹಾರ ಧಾನ್ಯದ ಕಿಟ್ ಗಳನ್ನು ನೀಡಿದ್ದು ಸಂಸ್ಥೆಯ ವತಿಯಿಂದ ಡಿಸಿ ಮತ್ತು ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿ ವಿತರಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಬಿ.ಸಿ. ಕರಿಗೌಡರ, ಡಾ. ಎಸ್.ಎಂ. ಹೊನ್ನಕೇರಿ,ಅಕ್ಷಯ ಪಾತ್ರೆಯ ಸಿಬ್ಬಂದಿ ಆರೋಗ್ಯ ಇಲಾಖೆಯ ಶ್ರೀಪಾದ ಕಮ್ಮಾರ ಸೇರಿದಂತೆ ಹಲವರು ಈ ಒಂದು ಸಮಯದಲ್ಲಿ ಉಪಸ್ಥಿತರಿದ್ದರು.