ಧಾರವಾಡ –
SSLC ಪರೀಕ್ಷೆ ಯಲ್ಲಿ ವಿದ್ಯಾಕಾಶಿ ಧಾರವಾಡ ಜಿಲ್ಲೆಯ ವಿದ್ಯಾರ್ಥಿ ಗಳು ಉತ್ತಮ ಸಾಧನೆ ಯನ್ನು ಮಾಡಿದ್ದಾರೆ. ಹೌದು ಜಿಲ್ಲೆಯ ಹಲವು ವಿದ್ಯಾರ್ಥಿ ಗಳು ಉತ್ತಮ ಫಲಿತಾಂಶದೊಂದಿಗೆ ಜಿಲ್ಲೆಯಲ್ಲಿ ಟಾಫರ್ಸ್ ಬಂದಿದ್ದಾರೆ ಹಲವರು ವಿದ್ಯಾರ್ಥಿ ಗಳು ಇನ್ನೂ ಎಸ್.ಎಸ್.ಎಲ್.ಸಿ ಟಾಫರ್ಸ್ ಬಂದ ಜಿಲ್ಲೆಯ ವಿದ್ಯಾರ್ಥಿಗಳನ್ನು ಜಿಲ್ಲಾಡಳಿತದಿಂದ ಸನ್ಮಾನಿಸಿ ಗೌರವಿಸಿದರು ಜಿಲ್ಲಾಧಿಕಾರಿ ನಿತೀಶ್ ಪಾಟೀಲ್ ಮತ್ತು ಇಲಾಖೆಯ ಅಧಿಕಾರಿಗಳು ವಿದ್ಯಾರ್ಥಿ ಗಳನ್ನು ಅಭಿನಂದನೆ ಸಲ್ಲಿಸಿ ಗೌರವಿಸಿದರು

ಹೌದು ರಾಜ್ಯಕ್ಕೆ ಪ್ರಥಮ ಬಂದ 625 ಅಂಕಗಳಿಗೆ 625 ಅಂಕಗಳಿಸಿದ ಧಾರವಾಡ ಪ್ರಜೇಂಟೆಷನ್ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿನಿ ನಾಗಲಕ್ಷ್ಮೀ ಅಗಡಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾಳೆ

ದ್ವಿತೀಯ ಸ್ಥಾನ – 625 ಅಂಕಗಳಿಗೆ 623 ಅಂಕಗಳಿಸಿದ ಮಾಧನಭಾವಿ ಸರಕಾರಿ ಪ್ರೌಢಶಾಲೆಯ ಪ್ರೀತಿ ಕೊಟಬಾಗಿ, ಧಾರವಾಡ ಅಂಜುಮನ್ ಪ್ರೌಢಶಾಲೆಯ ಸಾದಿಯಾ ಮುಜಾವರ, ಹುಬ್ಬಳ್ಳಿ ಬೆನಕ ವಿದ್ಯಾಮಂದಿರ ಶಾಲೆಯ ಸೌರವ ನಾಯಕ, ಚೇತನ ಪಬ್ಲಿಕ್ ಶಾಲೆಯ ಚೈತನ್ಯಾ ಶೇಟ್ಟಿ.

ತೃತೀಯ ಸ್ಥಾನ – 625 ಅಂಕಗಳಿಗೆ 621 ಅಂಕಗಳಿ ಸಿದ ದೇವಿಕೊಪ್ಪ ಸರಕಾರಿ ಪ್ರೌಢ ಶಾಲೆಯ ಅಂಕಿತಾ ಬಾವುಕರ,ವಿಶಾಲಾ ಭೋವಿ,ಸಿದ್ದಾರ್ಥ ಗಾಯಕವಾಡ,ಬೆಟದೂರ ಸರಕಾರಿ ಕಿತ್ತೂರ ರಾಣಿ ಚನ್ನಮ್ಮ ಪ್ರೌಢಶಾಲೆಯ ಪೂಜಾ ಮ್ಯಾಗಡೆ, ಹುಬ್ಬಳ್ಳಿ ಜಿ.ವ್ಹಿ.ಜೋಶಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಭಾಗ್ಯಶ್ರೀ ಜೋಗಿನ,ನವನಗರ ರೋಟರಿ ಪ್ರೌಢಶಾಲೆಯ ರಾಣಿ ಕಾಮತ, ಧಾರವಾಡ ಪ್ರಜೇಂಟೆಷನ್ ಬಾಲಕಿಯರ ಪ್ರೌಢ ಶಾಲೆಯ ಪ್ರೀಯಾ ಕುಡುವಕ್ಕಲ,ಸ್ಪಂದನಾ ಚನ್ನವೀರಗೌಡರ, ನಾಗವೇಣಿ ದೇಸಾಯಿ, ಸ್ನೇಹಾ ಪಾಟೀಲ ಮತ್ತು ಧಾರವಾಡ ಜೆ.ಎಸ್.ಎಸ್. ಪ್ರೌಢಶಾಲೆಯ ದೀಪಕ ಶೆಣೈ.ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಇದೇ ವೇಳೆ ಇವರೆಲ್ಲರೂ ಜಿಲ್ಲಾಧಿಕಾರಿ ಜೊತೆ ಸೆಲ್ಪಿ ತೆಗೆದುಕೊಂಡು ಸಾಧನೆ ಗೆ ಪಣ ತೊಟ್ಟರು