ಧಾರವಾಡ –
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆಯ ಕಾವು ರಂಗೇರುತ್ತಿದೆ.ದಿನದಿಂದ ದಿನಕ್ಕೆ ಪ್ರಚಾರದ ಕಾವು ರಂಗೇರುತ್ತಿದ್ದು ಇನ್ನೂ ಧಾರವಾಡದ ವಾರ್ಡ್ 1 ರಲ್ಲಿ ಕೈ ಪಕ್ಷದ ಅಭ್ಯರ್ಥಿ ನಿರ್ಮಲಾ ಹೊಂಗಲ ಅವರ ಪ್ರಚಾರ ಜೋರಾಗಿದೆ



ವಾರ್ಡ್ ನ ವಿವಿಧ ಬಡಾವಣೆಗಳಲ್ಲಿ ಇಂದು ಅಬ್ಬ ರದ ಪ್ರಚಾರವನ್ನು ಮಾಡಿದರು.ಪಕ್ಷದ ಕಾರ್ಯ ಕರ್ತರು ಮುಖಂಡರು ಆಪ್ತರೊಂದಿಗೆ ಮನೆ ಮನೆಗೆ ತೆರಳಿದ ಇವರು ಬಿಡುವಿಲ್ಲದೇ ಪ್ರಚಾರವನ್ನು ಮಾಡಿದರು.



ವಾರ್ಡ್ ನ ಹಲವು ಬಡಾವಣೆಗಳಲ್ಲಿನ ಮನೆ ಮನೆಗೆ ಪಾದಯಾತ್ರೆ ಮೂಲಕ ತೆರಳಿ ಮತಯಾ ಚನೆ ಮಾಡಿದರು.

ಪ್ರಮುಖವಾಗಿ ಕುಮಾರೇಶ್ವರ ನಗರ ತುಂಬೆಲ್ಲಾ ಅಬ್ಬರದ ಪ್ರಚಾರವನ್ನು ಮಾಡಿದರು.ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ನಿರ್ಮಲಾ ಹೊಂಗಲ ಅವರೊಂ ದಿಗೆ ಅನ್ನಪೂರ್ಣಾ,

ವಾಣಿ ಕರಿಗಾರ, ರೇಣುಕಾ ಕಡಿಮನಿ, ರಾಜು, ಸೋಮು ರತ್ನಾ ಬಾವಿ,ನಂದೀಶ ಹಡಪದ, ಸುರೇಖಾ,ರೋಹಣ ನದಾಫ್ ಸೇರಿದಂತೆ ಹಲವರು ಉಪಸ್ಥಿತರಿದ್ದು ಮತಯಾಚನೆ ಮಾಡಿದರು.























