ಚಿಕ್ಕಬಳ್ಳಾಪೂರ
ಮತದಾರರನ್ನು ಸೆಳೆಯಲು ಎನೇಲ್ಲಾ ಕಸರಸ್ತು ಮಾಡ್ತಾರೆ ಎಂಬೊದಕ್ಕೇ ಚಿಕ್ಕಬಳ್ಳಾಪೂರವೇ ಸಾಕ್ಷಿ. ಚಿಕ್ಕಬಳ್ಳಾಪುರ ಜಿಲ್ಲೆಯ ಗೌರೀ ಬಿದನೂರು ತಾಲ್ಲೂಕಿನಲ್ಲಿ ಗ್ರಾಮ ಪಂಚಾಯತ ಚುನಾವಣಾ ಕಾವು ಜೋರಾಗಿದೆ. ಗೌರೀ ಬಿದನೂರು ತಾಲ್ಲೂಕಿನ ಜರಬಂಡಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯನಲ್ಲಿ ಪಿಡಚಲಹಳ್ಳಿ ಗ್ರಾಮದಲ್ಲಿ ಕೆಲ ಅಬ್ಯರ್ಥಿಗಳು ಮನೆ ಮನೆಗೆ ಕೋಳಿಗಳನ್ನು ಹಂಚಿಕೆ ಮಾಡಿದ್ದಾರೆ.
ಮಿನಿ ಗೂಡ್ಸ್ ವಾಹನದಲ್ಲಿ ಕೋಳಿಗಳನ್ನು ತುಂಬಿಕೊಂಡು ಗ್ರಾಮಕ್ಕೇ ಬಂದು ಗ್ರಾಮದಲ್ಲಿ ಮನೆ ಮನೆಗೆ ಕೋಳಿಗಳನ್ನು ಹಂಚಿಕೆ ಮಾಡಿದ್ರು. ಗ್ರಾಮ ಪಂಚಾಯತ ಚುನಾವಣೆ ಹಿನ್ನಲೆಯಲ್ಲಿ ಕೆಲವರ ಹೀಗೆ ಕೋಳಿಗಳನ್ನು ಹಂಚಿಕೆ ಮಾಡಿ ಮತದಾರರನ್ನು ಸೆಳೆದರು.
ಗ್ರಾಮ ಪಂಚಾಯಿತಿ ಚುನಾವಣೆ ಅಭ್ಯರ್ಥಿಗಳು ಹೀಗೆ ಗ್ರಾಮದ ತುಂಬೆಲ್ಲಾ ರಾಜಾ ರೋಷವಾಗಿ ಕೋಳಿಗಳನ್ನು ಮನೆ ಮನೆಗೆ ಹೋಗಿ ಹಂಚಿಕೆ ಮಾಡಿದ್ದಾರೆ. ಟ್ರೇ ನಲ್ಲಿ ಕೊಳಿಗಳನ್ನು ತುಂಬಿಕೊಂಡು ಬಂದ ಅಭ್ಯರ್ಥಿಗಳ ಬೆಂಬಲಿಗರು ಪಿಡಚಲಹಳ್ಳಿ ಗ್ರಾಮದಲ್ಲಿ ನೀಡಿದರು.
ಇನ್ನೂ ಮಿನಿ ಗೂಡ್ಸ್ ನಲ್ಲಿ ಕೋಳಿಗಳನ್ನು ತುಂಬಿಕೊಂಡು ಗ್ರಾಮಕ್ಕೇ ಬರುತ್ತಿದ್ದಂತೆ ಕೋಳಿಗಳನ್ನು ಪಡೆಯಲು ಗ್ರಾಮದಲ್ಲಿ ಜನರು ಮುಗಿಬಿದ್ದಿದ್ದರು.
ಇವರೆಲ್ಲ ಆರೋಗ್ಯ ಸಚಿವ ಡಾ ಕೆ ಸುಧಾಕರ್ ಬೆಂಬಲಿತ ಅಭ್ಯರ್ಥಿಗಳಾಗಿದ್ದಾರೆ ಎನ್ನಲಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆ ಗೌರೀಬಿದನೂರು ತಾಲ್ಲೂಕಿನ ಪಿಡಚಲಹಳ್ಳಿಯಲ್ಲಿ ಗ್ರಾಮದಲ್ಲಿ ಈ ಒಂದು ಚಿತ್ರಣ ಕಂಡು ಬಂದಿತು.
ಆರೋಗ್ಯ ಸಚಿವ ಡಾ ಕೆ ಸುಧಾಕರ್ ಪ್ರತಿನಿಧಿಸುವ ಕ್ಷೇತ್ರ ವ್ಯಾಪ್ತಿಯಲ್ಲಿನ ಪಿಡಚಲಹಳ್ಳಿ ಗ್ರಾಮ ಇದಾಗಿದೆ.