ಹುಬ್ಬಳ್ಳಿ –
ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಧಾರವಾಡ ಜಿಲ್ಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹಾನಿ ಅವಾಂತರಗಳಾಗಿದ್ದು ಇನ್ನೂ ಧಾರಕಾರವಾದ ಈ ಒಂದು ಮಳೆಯಿಂದಾಗಿ ಕೆರೆ ಕಟ್ಟೆ ಒಡೆದು ರೈತರ ಜಮೀನುಗಳಿಗೆ ನುಗ್ಗಿದ ಘಟನೆ ಕಲಘಟಗಿಯಲ್ಲಿ ನಡೆದಿದೆ.

ಕೆರೆ ಒಡೆದು ನೂರಾರು ಎಕರೆಯಲ್ಲಿ ಬೆಳೆದ ಬೆಳೆ ಗಳು ಸಂಪೂರ್ಣ ಜಲಾವೃತವಾಗಿವೆ.ಭತ್ತ, ಸೋಯಾಬಿನ್,ಕಬ್ಬು, ಹತ್ತಿ, ಗೋವಿನಜೋಳ ಸೇರಿದಂತೆ ಹಲವಾರು ಬೆಳೆಗಳು ಜಲಾವೃತವಾಗಿದ್ದು ಕಂಡು ಬಂದಿತು.


ಇದರಿಂದ ದಿಕ್ಕು ತೋಚದಂತಾದಾಗಿದೆ ಅನ್ನದಾತನ ಪರಸ್ಥಿತಿ. ಇನ್ನೂ ಈ ಒಂದು ಸುದ್ದಿಯನ್ನು ತಿಳಿದು ಕೃಷಿ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಬೇಕಾಗಿತ್ತು ಆದರೆ ಕೇಳಿ ಸುಮ್ಮ ನಿದ್ದಾರೆ ಎಂಬ ಒಂದು ಆರೋಪವನ್ನು ರೈತರು ಅಧಿಕಾರಿಗಳ ಮೇಲೆ ಮಾಡಿದ್ದಾರೆ.
ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಈಗಾಗಲೇ ಬಹುತೇಕ ಎಲ್ಲಾ ಕೆರೆಗಳು ತುಂಬಿದ್ದು ಒಂದೆಡೆಯಾದರೆ ಅದೇ ಕೆರೆಗಳು ಹೀಗೆ ಹೊಡೆದು ನೆಮ್ಮದಿಯನ್ನು ಹಾಳು ಮಾಡುತ್ತಿವೆ.
ಸಧ್ಯ ಇನ್ನೂ ಕೂಡಾ ಧಾರವಾಡ ಜಿಲ್ಲೆಯಲ್ಲಿ ಸಾಕ ಷ್ಟು ಪ್ರಮಾಣದಲ್ಲಿ ಮಳೆ ಮುಂದುವರೆದಿದ್ದು ಹೀಗಾಗಿ ಬಿಡುವಿಲ್ಲದೇ ಜಿಲ್ಲೆಯಲ್ಲಿ ವರುಣ ದೇವ ಆರ್ಭಟಿಸುತ್ತಿದ್ದಾನೆ.
ಕಲಘಟಗಿ ತಾಲೂಕಿನ ಹಟಕಿನಾಳದ ಜಿಗಳಿ ಕೆರೆ ಒಡೆದು ದೊಡ್ಡ ಪ್ರಮಾಣದಲ್ಲಿ ಅವಾಂತರವಾಗಿದ್ದು ಇದರಿಂದ ತಾಲ್ಲೂಕಿನ ಅದರಲ್ಲೂ ಕೆರೆಯ ಕೆಳಬಾ ಗದ ರೈತರು ಸಾರ್ವಜನಿಕರು ಆತಂಕಗೊಂಡಿದ್ದಾರೆ.