ಕಲಘಟಗಿ –
ಮಾಜಿ ಸಚಿವ ಸಂತೋಷ್ ಲಾಡ್ ಮತ್ತೆ ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಬೆಂಗಳೂರಿನಿಂದ ಬಂದು ನೇರವಾಗಿ ಕ್ಷೇತ್ರದಲ್ಲಿನ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳುವ ದಾರಿ ಮಧ್ಯದಲ್ಲಿ ಯುವಕರೊಂದಿಗೆ ಕ್ರಿಕೆಟ್ ಆಡಿದರು.

ರಸ್ತೆ ಪಕ್ಕದಲ್ಲಿನ ಚಿಕ್ಕ ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದನ್ನು ನೋಡಿದ ಮಾಜಿ ಸಚಿವ ಸಂತೋಷ್ ಲಾಡ್ ಕಾರನ್ನು ನಿಲ್ಲಿಸಿ ಮೈದಾನಕ್ಕಿಳಿದರು.

ಸಂತೋಷ್ ಲಾಡ್ ಬರುವ ದೃಶ್ಯ ನೋಡಿದ ಯುವಕರು ಜೋರಾಗಿ ಸಿಳ್ಳೆ ಕೇಕೆ ಹೊಡೆದು ಬರಮಾಡಿಕೊಂಡರು. ಬರುತ್ತಿದ್ದಂತೆ ಮೊದಲಿಗೆ ಬ್ಯಾಟ್ ಕೊಟ್ಟುರು ಕೈಯಲ್ಲಿ ಬ್ಯಾಟ್ ಹಿಡಿದ ಮಾಜಿ ಸಚಿವ ಸಂತೋಷ್ ಲಾಡ್ ಸಖತ್ ಬ್ಯಾಟಿಂಗ್ ಮಾಡಿದರು.
ಒಂದಿಷ್ಟು ಬೌಂಡರಿ ಹೊಡೆದು ರಾಜಕೀಯದಲ್ಲಿ ಅಷ್ಟೇ ಅಲ್ಲದೇ ಮೈದಾನದಲ್ಲೂ ಆಡಬಲ್ಲೆ ಎಂಬುದನ್ನು ತೋರಿಸಿಕೊಟ್ಟರು. ನಂತರ ಯುವಕರಿಗೆ ಥ್ಯಾಂಕ್ಸ್ ಕೊಟ್ಟ ಅಲ್ಲಿಂದ ಮುಂದೆ ಬೇರೆ ಕಾರ್ಯಕ್ರಮಕ್ಕೆ ತೆರಳಿದರು.