ಬೆಳಗಾವಿ ಬ್ರೇಕಿಂಗ್
ಮಹಾರಾಷ್ಟ್ರದಲ್ಲಿ ಕನ್ನಡ ಮಾತನಾಡಿದ್ದಕ್ಕೆ ಚಾಲಕನ ಮೇಲೆ ನಡೆದ ಹಲ್ಲೆ ಪ್ರಕರಣ ಕುರಿತಂತೆ ಕೊನೆಗೂ ಕನ್ನಡಿಗ ಚಾಲಕನ ನೋವಿನ ಧ್ವನಿಗೆ ನ್ಯಾಯ ಸಿಕ್ಕಿದೆ.
ಚಾಲಕ ಗೋವಿಂದನಿಂದ ಭೂಂಜ್ ಮಹಾರಾಷ್ಟ್ರ ದಿಂದ ಬೆಂಗಳೂರಿಗೆ ಹೋಗುವ ಸಮಯದಲ್ಲಿ ಕನ್ನಡದಲ್ಲಿ ಮಾತನಾಡಿದಕ್ಕಾಗಿ ನಾಲ್ವರು ಬೈಕ್ ನಲ್ಲಿ ಬಂದು ಅಡ್ಡ ಗಟ್ಟಿ ಕನ್ನಡಿಗ ಚಾಲಕನ ಮೇಲೆ ಹಲ್ಲೆ ಮಾಡಿದ್ದರು.ಈ ಕುರಿತು ಚಾಲಕ ವಿಡಿಯೋ ಮಾಡಿ ನೋವನ್ನು ಹೇಳಿಕೊಂಡಿದ್ದನು.
ಅಲ್ಲದೇ ಈ ಕುರಿತು ಪೊಲೀಸ ಠಾಣೆಯಲ್ಲಿ ದೂರನ್ನು ದಾಖಲು ಮಾಡಿದ್ದನು.ದೂರು ಆಧರಿಸಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಗೋವಿಂದ್ ದೂರು ದಾಖಲಿಸಲು ಬೆಳಗಾವಿಯ ಪೋಲೀಸರು ಸಾಕಷ್ಟು ಪ್ರಮಾಣದಲ್ಲಿ ಸಹಾಯ ಮಾಡಿದ್ದರು.ಭಾಷಿಕ ಹಲ್ಲೆ ಪ್ರಕರಣದಲ್ಲಿ ಇದೇ ಮೊದಲು ಆರೋಪಿಗಳನ್ನು ಬಂಧನ ಮಾಡಲಾಗಿದೆ. ಇನ್ನೂ ಈ ಒಂದು ವಿಚಾರದಲ್ಲಿ ಬೆಳಗಾವಿ ಪೊಲೀಸರಿಗೆ ಅಭಿನಂದನೆಗಳನ್ನು ಹೋರಾಟಗಾರರು ಮತ್ತು ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಸಲ್ಲಿಸಿದ್ದಾರೆ.