ಧಾರವಾಡ –
ನುಗ್ಗಿಕೇರಿಯಲ್ಲಿ ಕಲ್ಲಂಗಡಿ ಹಣ್ಣಿನ ವ್ಯಾಪಾರ ಮಾಡುತ್ತಿದ್ದ ಮುಸ್ಲಿಂ ಧರ್ಮದ ವ್ಯಾಪಾರಿಯ ಅಂಗಡಿ ಧ್ವಂಸ ಮಾಡಿ ಗಲಾಟೆ ಮಾಡಿದ ಪ್ರಕರಣ ಕುರಿತಂತೆ ಧಾರವಾಡದ ಗ್ರಾಮೀಣ ಪೊಲೀಸರು ನಾಲ್ವರನ್ನು ಬಂಧನ ಮಾಡಿದ್ದಾರೆ ಹೌದು ಕಲ್ಲಂಗಡಿ ಹಣ್ಣಿನಂಗಡಿ ದ್ವಂಸ ಮಾಡಿದ ಪ್ರಕರಣ ವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಹಾಗೇ ದೂರು ನೀಡಿದ ಬೆನ್ನಲ್ಲೇ ಈ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರೆಲ್ಲರೂ ಶ್ರೀರಾಮ ಸೇನೆಯ ನಾಲ್ವರು ಕಾರ್ಯ ಕರ್ತರಾಗಿದ್ದಾರೆ.ಮೈಲಾರಪ್ಪ ಗುಡ್ಡಪ್ಪನವರ, ಮಹಾಲಿಂಗ ಐಗಳಿ, ಚಿದಾನಂದ ಕಲಾಲ, ಕುಮಾರ ಕಟ್ಟಿಮನಿ ಬಂಧಿತ ರಾಗಿದ್ದಾರೆ.ನುಗ್ಗಿಕೇರಿ ಹನುಮಂತ ದೇವಸ್ಥಾನದಲ್ಲಿ ನಿನ್ನೆ ನಡೆದಿದ್ದ ಗಲಾಟೆ.ಈ ಒಂದು ಸಂಬಂಧ ದೂರು ದಾಖಲಿ ಸಿದ್ದ ನಬಿಸಾಬ್ ಹಾನಿಗೀಡಾದ ಕಲ್ಲಂಗಡಿ ಹಣ್ಣಿನಂಗಡಿ ಮಾಲೀಕ ಸಂಜೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲು ಮಾಡಿದ್ದರು.
ಧಾರವಾಡ ಗ್ರಾಮೀಣ ಠಾಣೆಯಲ್ಲಿ ದಾಖಲಾಗಿತ್ತು ದೂರು ಹೀಗಾಗಿ ನಾಲ್ವರನ್ನು ಪೊಲೀಸರು ಬಂಧಿಸಿದ್ದು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.