ಚಿಕ್ಕೋಡಿ –
ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರು ಮುಖ್ಯೋ ಪಾಧ್ಯಾಯ ಹುದ್ದೆಯಲ್ಲಿ ಪ್ರಭಾರಿಯಾಗಿ ಕರ್ತವ್ಯ ನಿರ್ವಹಿ ಸುತ್ತಿದ್ದು ಈ ಒಂದು ಶಿಕ್ಷಕ ರಿಗೆ ಪ್ರಭಾರಿ ಭತ್ಯೆ ಮಂಜೂರು ಮಾಡಿದ ಕುರಿತು ಶಿಕ್ಷಕರೊಬ್ಬರು ಇಲಾಖೆಗೆ ಮಾಹಿತಿ ಯನ್ನು ಕೇಳಿದ್ದಾರೆ.ಹೌದು ರಾಜು ಹೆಚ್ ಗ್ರೇಡ್ 2 ಸಹ ಶಿಕ್ಷಕರು ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಅಡ್ಡಹಳ್ಳಿ ಬೆಳಗಾವಿ ಯ ಅಥಣಿ ತಾಲೂಕಿನ ಇವರು ಇಲಾಖೆಗೆ ಮಾಹಿತಿ ಕೇಳಿದ್ದಾರೆ.
ಮಾಹಿತಿ ಹಕ್ಕಿನಡಿಯಲ್ಲಿ ಇವರು ಮಾಹಿತಿಯನ್ನು ಕೇಳಿದ್ದು ಇವರ ಪತ್ರದ ಬೆನ್ನಲ್ಲೇ ಇಲಾಖೆಯ ಅಧಿಕಾರಿಗಳು ಸಧ್ಯ ರಾಜ್ಯ ಸರ್ಕಾರಕ್ಕೆ ಸ್ಪಷ್ಟನೆ ಕೇಳಿ ಪತ್ರ ಬರೆದಿದ್ದಾರೆ. ಒಟ್ಟಾರೆ ಯಾವುದೇ ಒಂದು ವಿಚಾರ ಕುರಿತು ಮಾಹಿತಿಯನ್ನು ಇಟ್ಟುಕೊಳ್ಳಬೇಕಾಗಿದ್ದ ಇಲಾಖೆ ಮಾಹಿತಿಗಾಗಿ ಮತ್ತೊಂದು ಇಲಾಖೆಗೆ ಪತ್ರವನ್ನು ಬರೆದಿದ್ದು ವಿಷಾದದ ಸಂಗತಿಯಾ ಗಿದೆ.