ಧಾರವಾಡ –
ಹೌದು ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಸೆಪ್ಟಂಬರ್ 17 ರಿಂದ ಕೃಷಿ ಮೇಳ ನಡೆಯಲಿದ್ದು ಕೃಷಿ ಮೇಳದಲ್ಲಿ ಈ ಬಾರಿ ಬೀಜ ಮೇಳ ತುಂಬಾ ವಿಶೇಷವಾ ಗಿದ್ದು ಬೀಜ ಮೇಳದ ವಿಶೇಷ ಅಧಿಕಾರಿಗಳಾಗಿರುವ ಡಾ ಜೆ ಎಸ್ ಹಿಳ್ಳಿ ಅವರ ನೇತ್ರತ್ವದಲ್ಲಿ ಬೀಜ ಮೇಳ ಸಿದ್ದವಾ ಗಿದೆ.ಪ್ರತಿ ವರ್ಷ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮುಂಗಾರು ಹಂಗಾಮಿಗೆ ಬೇಕಾಗುವ ಉತ್ಕ್ರಷ್ಟ ಗುಣ ಮಟ್ಟದ ಬೀಜಗಳನ್ನು ಕೃಷಿ ವಿಶ್ವವಿದ್ಯಾಲಯ ಸಂಶೋಧನೆ ಮಾಡಿಕೊಂಡು ರೈತರಿಗೆ ನೀಡುತ್ತಿದ್ದು ವರ್ಷವಿಡಿ ರೈತರು ಇಲ್ಲಿಯೇ ತಮಗೆ ಬೇಕಾದ ಬೀಜಗಳನ್ನು ಖರೀದಿ ಮಾಡು ತ್ತಿದ್ದು ಅದರಲ್ಲೂ ಕೃಷಿ ಮೇಳದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಖರೀದಿ ಮಾಡುತ್ತಾರೆ.
ಹೀಗಾಗಿ ಕೃಷಿ ಮೇಳದಲ್ಲಿ ಬೀಜ ಮೇಳವು ತುಂಬಾ ವಿಶೇಷವಾಗಿ ರೈತರನ್ನು ಕೈಬೀಸಿ ಕರೆಯುತ್ತಿದ್ದು ಮೇಳದಲ್ಲಿ ಪ್ರಮುಖ ಆಕರ್ಷಣೆಯಾಗಿದ್ದು ಹೀಗಾಗಿ ಈ ಬಾರಿಯ ಕೃಷಿ ಮೇಳದಲ್ಲಿ ಬೀಜ ಮೇಳ ಪ್ರಮುಖ ಆಕರ್ಷಣೆಯಾಗಿದ್ದು ಸೆಪ್ಟಂಬರ್ 17 ರಂದು ಉದ್ಘಾಟನೆಯಾಗಲಿದೆ.ಅಂದು ಬೆಳಿಗ್ಗೆ 11 30 ಗಂಟೆಗೆ ಕೃಷಿ ವಿವಿ ಆವರಣದ ಮುಖ್ಯ ವೇದಿಕೆಯಲ್ಲಿ ಈ ಒಂದು ಮೇಳವನ್ನು ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಅಧ್ಯಕ್ಷರಾಗಿರುವ ಜಿ ಶಿವನಗೌಡರು ಚಾಲನೆ ನೀಡಲಿದ್ದು ಮುಖ್ಯ ಅತಿಥಿಗಳಾಗಿ ಡಾ ಜಿ ಟಿ ಪುತ್ರ,ಡಾ ಕರುಣಾಕರ,ವಿವೇಕ ಮೋರೆ,ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದು ಅಧ್ಯಕ್ಷತೆಯನ್ನು ಕೃಷಿ ವಿವಿ ಕುಲಪತಿಗಳಾದ ಡಾ ಆರ್ ಬಸವರಾಜಪ್ಪ ವಹಿಸಿಕೊಳ್ಳಲಿ ದ್ದಾರೆ.
ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ ಈ ಬಾರಿ ಈ ಒಂದು ಬೀಜ ಮೇಳವು ತುಂಬಾ ವಿಶೇಷವಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ರೈತರು ಆಗಮಿಸಿ ಪಾಲ್ಗೊಂಡು ಬೀಜ ಮೇಳದ ಲಾಭವನ್ನು ಪಡೆದುಕೊಳ್ಳುವಂತೆ ಬೀಜ ಮೇಳದ ಮತ್ತು ಬೀಜ ನಿಗಮದ ವಿಭಾಗದ ವಿಶೇಷಾಧಿಕಾರಿಗ ಳಾಗಿರುವ ಡಾ ಜೆ ಎಸ್ ಹಿಳ್ಳಿ ಅವರು ಸರ್ವರನ್ನೂ ಸ್ವಾಗತ ಮಾಡಿ ಆಮಂತ್ರಣ ನೀಡಿದ್ದಾರೆ.ಇನ್ನೂ 2022 ರಲ್ಲಿ ಐಐಎಸ್ ಎಸ್ ಮಾವೋ ದಿಂದ ರಾಷ್ಟ್ರಮಟ್ಟದಲ್ಲಿ ಉತ್ತಮ ಗುಣಮಟ್ಟದ ಬೀಜೋತ್ಪಾದನೆ ಪ್ರತಿಷ್ಠೆಯ ಪ್ರಶಸ್ತಿ ಭಾಜರಾಗಿದ್ದು ಇದು ಬೀಜ ಘಟಕದ ಉತ್ಕ್ರಷ್ಟ ಗುಣಮಟ್ಟಕ್ಕೆ ಹಿಡಿದ ಕೈಗನ್ನಿಡಿಯಾಗಿದೆ.