ಧಾರವಾಡ –
ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿದ ಘಟನೆ ಧಾರವಾಡದ ನವಲೂರು ಗ್ರಾಮ ದಲ್ಲಿ ನಡೆದಿದೆ. ಗ್ರಾಮದ ಜಮೀನೊಂದರಲ್ಲಿ ಈ ಒಂದು ಘಟನೆ ನಡೆದಿದೆ.ಚಂದ್ರಶೇಖರ ಹಿರೇಮಠ ಎಂಬುವರೇ ಗಾಳಿಯಲ್ಲಿ ಗುಂಡು ಹಾರಿಸಿದವರಾಗಿದ್ದಾರೆ.

ರಾಜಶೇಖರ ಹಿರೇಮಠ ಮತ್ತು ಮತ್ತು ಚಂದ್ರಶೇಖ ರ ಹಿರೇಮಠ ಸಂಬಂಧಿಕರಾಗಿದ್ದು ಇವರ ನಡುವೆ ಆಸ್ತಿ ವಿವಾದವಿತ್ತು ಕಳೆದ ಹಲವಾರು ವರ್ಷಗಳಿಂದ ತೆರೆ ಮರೆಯಲ್ಲಿ ಸಣ್ಣ ಪುಟ್ಟ ಪ್ರಮಾಣದಲ್ಲಿ ಜಗಳ ಗದ್ದಲ ಗಲಾಟೆ ಯಾಗುತ್ತಿತ್ತು ಈ ಒಂದು ಕುರಿತು ನವಲೂರು ಗ್ರಾಮದ ಹಿರಿಯರು ರಾಜಿ ಸಂಧಾನ ಮಾಡಿದ್ದರು ಆದರೂ ಪರಿಹಾರವಾಗಿರಲಿಲ್ಲ ಕೊನೆ ಯಲ್ಲಿ ನಿನ್ನೆ ಚಂದ್ರಶೇಖರ ಇದ್ದ ತೋಟದಲ್ಲಿ ರಾಜ ಶೇಖರ ಬಂದಿದ್ದಾರೆ ಆಕ್ರೋಶಗೊಂಡು ಅವರನ್ನು ಹೆದರಿಸಲು ಚಂದ್ರಶೇಖರ ಹಂದಿಗೆ ಗುಂಡು ಹಾರಿಸಿದ್ದಾರೆ.

ಇನ್ನೂ ವಿಷಯ ತಿಳಿದ ವಿದ್ಯಾಗಿರಿ ಪೊಲೀಸರು ಇಬ್ಬರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ಮಾಡತಾ ಇದ್ದಾರೆ