ಕೊಪ್ಪಳ –
ಸಾರಿಗೆ ಇಲಾಖೆಯಲ್ಲಿ ಬಸ್ ಚಾಲಕರ ನಿರ್ವಾಹಕ ನರಕಯಾತನೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಳೆದ ತಿಂಗಳು ಅರ್ಧ ವೇತನವಾಗಿದ್ದ ಇಲಾಖೆಯ ಸಿಬ್ಬಂದಿಗಳ ವೇತನ ಈ ತಿಂಗಳವೂ ಮತ್ತೆ ಅದೇ ರಾಗ ಅದೇ ಕಥೆಯಾಗಿದೆ.

ಈ ತಿಂಗಳವೂ ಮತ್ತೆ ಅರ್ಧ ಸಂಬಳವನ್ನು ಹಾಕಲಾಗಿದೆ. ಇನ್ನೂ ಸಂಸಾರ ಜೀವನ ನಡೆಸಲು ಇಲಾಖೆಯ ನೌಕರರು ಪರದಾಡುತ್ತಿದ್ದಾರೆ. ಇನ್ನೂ ಇವೆಲ್ಲದರ ನಡುವೆ ಇಲಾಖೆಯ ನಿರ್ವಾಹಕ ರೊಬ್ಬರು ಕೈಗೆ ಸರಿಯಾಗಿ ಸಿಗದ ವೇತನದಿಂದಾಗಿ ಕಂಗಾಲಾಗಿದ್ದಾರೆ.

ಹೌದು ಒಂದು ಕಡೆ ಜೀವನ ಸಂಸಾರ ನಡೆಸಲು ತುಂಬಾ ತುಂಬಾ ಸಮಸ್ಯೆಯಾಗುತ್ತಿದ್ದು ಹೀಗಾಗಿ ಬೇಸತ್ತ ಇಲಾಖೆಯ ನಿರ್ವಾಹಕರೊಬ್ಬರು ತಮ್ಮ ಕಿಡ್ನಿಯನ್ನು ಮಾರಾಟಕ್ಕೆ ಇಟ್ಟಿದ್ದಾರೆ.

ಹೌದು ಕೊಪ್ಪಳದ ಗಂಗಾವತಿ ಡಿಪೋ ದಲ್ಲಿ ನಿರ್ವಾಹಕರಾಗಿರುವ ಹನಮಂತ ಕಲೇಗಾರ ಇವರೇ ಈಗ ತಮ್ಮ ಕಿಡ್ನಿಯನ್ನು ಮಾರಾಟಕ್ಕೆ ಇಟ್ಟು ಈಗ ಮುಂದಾಗಿದ್ದಾರೆ.

ನಾನು ಒಬ್ಬ ಸಾರಿಗೆ ನೌಕರನಾಗಿದ್ದೇನೆ ನನಗೆ ಮನೆ ಬಾಡಿಗೆ ರೇಷನ್ ತರುವುದಕ್ಕೆ ಹಣ ಇಲ್ಲ ಆದರೆ ನನ್ನ ಕಿಡ್ನಿ ಮಾರಾಟಕ್ಕಿದೆ ಅಂತಾ ತಮ್ಮ ಫೇಸ್ ಬುಕ್ ನಲ್ಲಿ ಪೊಸ್ಟ್ ಮಾಡಿದ್ದಾರೆ.

ಈ ಒಂದು ಪೊಸ್ಟ್ ನ್ನು ನೋಡತಾ ಇದ್ದರೇ ನಿಜವಾಗಿಯೂ ಸಾರಿಗೆ ಇಲಾಖೆಯಲ್ಲಿ ಇಂಥಹ ಪರಸ್ಥಿತಿ ಇದೇನಾ ಇಂಥಹ ಜೀವನವನ್ನು ನಡೆಸುತ್ತಿದ್ದಾರೆನಾ ನೌಕರರು ಎಂಬ ಅನುಮಾನ ಎಲ್ಲರನ್ನೂ ಕಾಡುತ್ತಿದ್ದು ಇದಕ್ಕೆ ಈ ಒಂದು ಪೊಸ್ಟ್ ಮತ್ತು ಎರಡು ತಿಂಗಳಿನಿಂದ ನೌಕರರ ಕೈಗೆ ಬಂದ ಸಂಬಳವೇ ಸಾಕ್ಷಿಯಾಗಿದೆ.

ಇನ್ನೂ ಮುಖ್ಯವಾಗಿ ನಗರ ಪ್ರದೇಶದಲ್ಲಿ ಸಂಸಾರ ಮಕ್ಕಳು ಮನೆ ಹೀಗೆ ಹತ್ತು ಹಲವಾರು ಖರ್ಚುಗಳು ಇವುಗಳ ನಡುವೆ ಕೈಗೆ ಸಿಗುತ್ತಿರುವ ಅರ್ಧ ವೇತನದಿಂದಾಗಿ ಹೇಗೆ ಬದುಕಬೇಕು ಎಂಬ ಪ್ರಶ್ನೆ ಕಾಡುತ್ತಿದ್ದು ಇನ್ನಾದರೂ ಸಂಭಂಧಿಸಿದ ಇಲಾಖೆಯ ಸಚಿವರು ಅಧಿಕಾರಿಗಳು ಇಲಾಖೆಯಲ್ಲಿ ನೌಕರರು ಅನುಭವಿಸುತ್ತಿರುವ ನರಕಯಾತನೆಯನ್ನು ಸ್ವಲ್ಪು ವಿಚಾರಿಸಿ ಸಮಸ್ಯೆಗೆ ಸ್ಪಂದಿಸಬೇಕು ಇಲ್ಲವಾದರೆ ಇಲಾಖೆಯ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ.