ಧಾರವಾಡ –
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆಯ ಮತ ಎಣಿಕೆ ನಾಳೆ ಬೆಳಿಗ್ಗೆ 8 ಗಂಟೆ ಯಿಂದ ಧಾರವಾಡದ ಕೃಷಿ ವಿವಿ ಯಲ್ಲಿ ಮತ ಏಣಿಕೆ ನಡೆಯಲಿದ್ದು ಅಗತ್ಯ ಸಿದ್ದತೆ ಪೂರ್ಣಗೊಂಡಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದರು
ಹೌದು ಸಪ್ಟೆಂಬರ್ 3 ರಂದು ಜರುಗಿರುವ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಸಾರ್ವತ್ರಿಕ ಚುನಾವಣೆಯ ಮತಗಳ ಏಣಿಕೆ ಕಾರ್ಯವು ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ನಾಳೆ ಸಪ್ಟೆಂಬರ್ 6 ರಂದು ಬೆಳಿಗ್ಗೆ 8 ಗಂಟೆಯಿಂದ ಆರಂಭವಾಗಲಿದೆ ಎಂದು ಜಿಲ್ಲಾ ಚುನಾವಣಾ ಅಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದರು
ಈ ಕುರಿತು ನಾಳೆಯ ಸಿದ್ದತೆಗಳನ್ನು ಪರಿಶೀಲನೆ ನಡೆಸಿ ನಾಳೆ ಬೆಳಿಗ್ಗೆ 8 ಗಂಟೆಯಿಂದ ಮತ ಏಣಿಕೆ ಕಾರ್ಯ ನಡೆಯಲಿದ್ದು ಅಗತ್ಯ ಸಿದ್ದತೆ ಮಾಡಿಕೊಳ್ಳ ಲಾಗಿದೆ.ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಯ 82 ವಾರ್ಡಗಳಿಗೆ ಸೆಪ್ಟೆಂಬರ್ 3 ರಂದು ಚುನಾವಣೆ ಜರುಗಿದ್ದು 420 ಜನ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ ಎಂದರು
ಮತ ಏಣಿಕೆಗೆ 140 ಸಿಬ್ಬಂದಿ ಮೂರು ಟೇಬಲ್
ನಾಳೆಯ ಮತ ಏಣಿಗೆಗಾಗಿ ಒಟ್ಟು 140 ಜನ ಸಿಬ್ಬಂದಿಗಳನ್ನು ತರಬೇತಿ ನೀಡಿ ಸಿದ್ದಗೊಳಿಸ ಲಾಗಿದೆ.ಪ್ರತಿ ಚುನಾವಣಾಧಿಕಾರಿಗೆ ಮತ ಏಣಿಕೆ ಗಾಗಿ ಮೂರು ಟೆಬಲ್ ಗಳನ್ನು ಮಾಡಲಾಗಿದೆ ಎಂದರು
ಒಟ್ಟು 16 ಜನ ಚುನಾವಣಾಧಿಕಾರಿಗಳಿದ್ದು ಪ್ರತಿ ಯೊಬ್ಬರಿಗೆ ಮೂರು ಟೇಬಲ್ ನೀಡಲಾಗಿದ್ದು ಪ್ರತಿ ಚುನಾವಣಾಧಿಕಾರಿ ಅಧೀನದಲ್ಲಿ ಏಕಕಾಲಕ್ಕೆ ಮೂರು ವಾರ್ಡ್ ಗಳ ಮತ ಏಣಿಕೆ ಕಾರ್ಯ ಆರಂಭವಾಗುತ್ತದೆ.16 ಜನ ಚುನಾವಣಾಧಿಕಾರಿ ಗಳು ಸೇರಿ ಒಟ್ಟು 48 ವಾರ್ಡ್ ಗಳ ಮತ ಏಣಿಕೆ ಕಾರ್ಯ ಏಕಕಾಲಕ್ಕೆ ಆರಂಭವಾಗುತ್ತದೆ.ಹೀಗೆ ಆಯಾ ವಾರ್ಡ್ ಮತ ಏಣಿಕೆ ಪೂರ್ಣಗೊಂಡ ನಂತರ ಮತ್ತೊಂದು ವಾರ್ಡ್ ನ ಮತ ಏಣಿಕೆ ಆರಂಭಿಸುತ್ತಾರೆ.ಮತ್ತು ಚುನಾವಣಾಧಿಕಾರಿಗಳು ತಮ್ಮ ವಾರ್ಡ ಗಳ ಫಲಿತಾಂಶವನ್ನು ಘೋಷಿಸು ತ್ತಾರೆ ಎಂದರು
ಇನ್ನೂ ಒಬ್ಬ ಅಭ್ಯರ್ಥಿ ಪರವಾಗಿ ಒಬ್ಬರಿಗೆ ಮಾತ್ರ ಅವಕಾಶವನ್ನು ಒಳಗಡೆ ಬರಲು ಅವಕಾಶವನ್ನು ಕಲ್ಪಿಸಲಾಗಿದೆ ಮತ ಏಣಿಕಾ ಕೇಂದ್ರಕ್ಕೆ ಮತ ಮತ ಏಣಿಕಾ ಏಜಂಟ್ ಸ್ಪರ್ಧಿಸಿರುವ ಅಭ್ಯರ್ಥಿ ಮತ್ತು ಚುನಾವಣಾ ಏಜೆಂಟ್ ಮಾತ್ರ ಬರಲು ಅವಕಾಶ ವಿದೆ.ಮತ್ತು ಮತಗಳ ಏಣಿಕಾ ಟೇಬಲ್ ಗೆ ಪ್ರತಿ ವಾರ್ಡ್ ನ ಮತ ಏಣಿಕೆಗಾಗಿ ಆ ವಾರ್ಡ್ ಗೆ ಸ್ಪರ್ಧಿ ಸಿರುವ ಅಭ್ಯರ್ಥಿ ಪರವಾಗಿ ಒಬ್ಬ ಮತ ಏಣಿಕಾ ಏಜೆಂಟ್ ಅಥವಾ ಚುನಾವಣಾ ಏಜೆಂಟ್ ಅಥವಾ ಅಭ್ಯರ್ಥಿ ಮಾತ್ರ ಹಾಜರಾಗಬೇಕು.ಒಬ್ಬ ಅಭ್ಯರ್ಥಿ ಪರವಾಗಿ ಒಬ್ಬರಿಗೆ ಮಾತ್ರ ಅವಕಾಶ ನೀಡಲಾಗಿದೆ
ಕೋವಿಡ್ ಮಾರ್ಗಸೂಚಿ ಪಾಲನೆ ಕಡ್ಡಾಯ
ಮತ ಏಣಿಕಾ ಕೇಂದ್ರ ಪ್ರವೇಶಿಸುವ ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ.
ಪರಸ್ಪರ ಸಾಮಾಜಿಕ ಅಂತರ ಕಾಪಾಡುವುದು ಪ್ರತಿಯೊಬ್ವರ ಕರ್ತವ್ಯ ಎಲ್ಲರೂ ಸಹಕಾರ ನೀಡ ಬೇಕು.ಮತ ಏಣಿಕೆ ಕೇಂದ್ರ ಹಾಗೂ ಸುತ್ತಲಿನ ಪ್ರದೇಶದಲ್ಲಿ ಮಹಾನಗರ ಪೊಲೀಸ್ ಆಯುಕ್ತ ಲಾಬುರಾಮ ಅವರ ನೇತೃತ್ವದಲ್ಲಿ ಅಗತ್ಯ ಪೊಲೀಸ್ ಬಂದೊಬಸ್ತ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ತಿಳಿಸಿದ್ದಾರೆ.