ಹುಬ್ಬಳ್ಳಿ –
ಹುಬ್ಬಳ್ಳಿಯಲ್ಲಿ ಶಾಸಕ ಪ್ರಸಾದ್ ಅಬ್ಬಯ್ಯ ಹಾಗೂ ಪಿಎಸ್ ಐ ಸದಾಶಿವ ಕಾನಟ್ಟಿ ನಡುವೆ ವಾಗ್ವಾದ ನಡೆದಿದೆ. ಹೌದು ಹಳೇ ಹುಬ್ಬಳ್ಳಿಯ ಪೊಲೀಸ್ ಠಾಣೆ ಎದುರು ಈ ಒಂದು ಘಟನೆ ನಡೆದಿದೆ.

ಮಾದ್ಯಮಗಳ ಜೊತೆ ಠಾಣೆಯ ಹೊರಗೆ ಹೋಗಿ ಮಾತ ನಾಡಿ ಎಂದು ಪಿಎಸ್ ಐ ಅವರು ಹೇಳಿದರು.ಇದನ್ನು ಹೇಳುತ್ತಿದ್ದಂತೆ ಶಾಸಕ ಪ್ರಸಾದ ಅಬ್ಬಯ್ಯ ಪೊಲೀಸ್ ಅಧಿಕಾರಿ ಜೊತೆ ವಾಗ್ವಾದ ನಡೆಸಿದರು.ಪಿಎಸ್ ಐ ಸದಾಶಿವ ಕಾನಟ್ಟಿ ಹಾಗೂ ಶಾಸಕರ ನಡುವೆ ವಾಗ್ವಾದ ನಡದಿದ್ದು ಕಂಡು ಬಂದಿತು.
ಗೇಟ್ ಎದುರು ನಿಲ್ಲಬೇಡಿ ಎಂದು ಶಾಸಕನಿಗೆ ಪಿಎಸ್ ಐ ಅವರು ಹೇಳಿದ್ದು ಇದಕ್ಕೆ ನನ್ನನ್ನೇ ಹೊರಗೆ ಹಾಕ್ತಿರಾ ಎಂದು ಗದರಿದ ಶಾಸಕ ಪ್ರಸಾದ ಅಬ್ಬಯ್ಯ ಹಳೇ ಹುಬ್ಬಳ್ಳಿ ಯ ಪೊಲೀಸ್ ಠಾಣೆಯಲ್ಲಿ ಅಧಿಕಾರಿಗಳ ಭೇಟಿ ಮಾಡಿ ಠಾಣೆಯ ಹೊರಗೆ ಬಂದಿದ್ದರು ಶಾಸಕ ಪ್ರಸಾದ ಅಬ್ಬಯ್ಯ ಅವರು ನಂತರ ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳು ಪರಸ್ಥಿತಿಯನ್ನು ತಿಳಿಗೊಳಿಸಿ ಶಾಸಕರನ್ನು ಕಳಿಸಿಕೊಟ್ಟರು.
