ಧಾರವಾಡ ಹುಬ್ಬಳ್ಳಿ
ಇಂದಿನಿಂದ ಶಾಲಾ ಕಾಲೇಜು ಆರಂಭ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಧಾರವಾಡ ಅವಳಿ ನಗರ ಸೇರಿದಂತೆ ಜಿಲ್ಲೆಯಲ್ಲಿ ಶಾಲಾ ಕಾಲೇಜುಗಳು ಬಾಗಿಲು ತೆರೆದುಕೊಂಡಿವೆ.

ಈಗಾಗಲೇ ಜಿಲ್ಲಾದ್ಯಂತ ಶಾಲೆ ಆರಂಭಿಸಲು ಎಲ್ಲಾ ಸಿದ್ದತೆಗಳನ್ನು ಇಲಾಖೆಯ ಅಧಿಕಾರಿಗಳು ಜಿಲ್ಲಾಡಳಿತ ಸಕಲ ವ್ಯವಸ್ಥೆಯೊಂದಿಗೆ ಇಂದಿನಿಂದ ಶಾಲಾ ಕಾಲೇಜುಗಳನ್ನು ಆರಂಭ ಮಾಡಲಾಗಿದೆ.

ಹೊಸ ವರ್ಷದ ದಿನ ಹೊಸದಾಗಿ ಶಾಲೆ ಆರಂಭ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಧಾರವಾಡ ಸೇರಿದಂತೆ ಜಿಲ್ಲೆಯಲ್ಲಿ ಶಾಲೆಗಳನ್ನು ಶೃಂಗಾರ ಮಾಡಿದ ಚಿತ್ರಣ ಕಂಡು ಬಂದಿತು.
ಶಾಲಾ ಕಾಲೇಜುಗಳ ಮುಂಭಾಗದಲ್ಲಿ
ರಂಗೋಲಿ ಹಾಕುತ್ತಿರೋ ವಿದ್ಯಾರ್ಥಿಗಳು, ಶಿಕ್ಷಕರು
ಹೊಸ ವರ್ಷಕ್ಕೆ ರಂಗೋಲಿಯಲ್ಲಿಯೇ ಶುಭಾಶಯಗಳನ್ನು ಬರೆದಿರುವ ಚಿತ್ರಣ ಧಾರವಾಡದ ನಗರದ ಸರಕಾರಿ ಪ್ರೌಢಶಾಲೆ
ಆರ್.ಎನ್. ಶೆಟ್ಟಿ ಕ್ರೀಡಾಂಗಣದ ಆವರದಲ್ಲಿರೋ ಶಾಲೆ ಮುಂದೆ ಕಂಡು ಬಂದಿತು.
ಅಲ್ಲದೇ ತಳಿರು ತೋರಣ ಕಟ್ಟಿ ಸಂಭ್ರಮದ ವಾತಾವರಣವನ್ನು ಶಾಲಾ ಕಾಲೇಜುಗಳಲ್ಲಿ ನಿರ್ಮಾಣ ಮಾಡಿ ವಿದ್ಯಾರ್ಥಿಗಳ ಸ್ವಾಗತಕ್ಕೆ ಶಿಕ್ಷಕರು ಜಿಲ್ಲಾಡಳಿತ ಶಿಕ್ಷಣ ಇಲಾಖೆ ಎಲ್ಲಾ ಪ್ರಮುಖ ವ್ಯವಸ್ಥೆ ಮಾಡಿಕೊಂಡು ಸಿದ್ದವಾಗಿವೆ.