ಹುಬ್ಬಳ್ಳಿ ಧಾರವಾಡ –
ಸಾರ್ವಜನಿಕ ಪ್ರದೇಶಗಳಲ್ಲಿ ಮಾಸ್ಕ್ ವಿಚಾರ ಕುರಿತು ದಂಡ ವಿಧಿಸುವ ಕುರಿತು ಬೆಂಗಳೂರು ನಲ್ಲಿ ಈಗಾಗಲೇ BBMP ಖಾಸಗಿ ಭದ್ರತಾ ಸಿಬ್ಬಂದಿ ಮಾರ್ಸೆಲ್ ಗಳನ್ನು ನೇಮಕ ಮಾಡಿಕೊಂಡಿದೆ.ಈ ಒಂದು ವಿಚಾರದ ಬೆನ್ನಲ್ಲೇ ಇತ್ತ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಕೂಡಾ ಇದೇ ರೀತಿ ಮಾರ್ಸೆಲ್ ಗಳನ್ನು ನೇಮಕ ಮಾಡಿಕೊಂಡಿದೆ
ಹೌದು ಕರೋನ ಮಹಾಮಾರಿಯನ್ನು ನಿಯಂತ್ರಣ ಮಾಡುವ ಉದ್ದೇಶದಿಂದ ಸಾರ್ವಜನಿಕ ಪ್ರದೇಶ ದಲ್ಲಿ ಮಾಸ್ಕ್ ಇಲ್ಲದೇ ತಿರುಗಾಡುತ್ತಿರುವ ವರಿಗೆ ತಿಳುವಳಿಕೆ ಮೂಡಿಸಿ ದಂಡವನ್ನು ಹಾಕುವ ಉದ್ದೇಶ ದಿಂದ ಈ ಒಂದು ಕಾರ್ಯಕ್ಕೆ ಪ್ಲಾನ್ ಮಾಡಲಾಗಿದೆ
ಪಾಲಿಕೆ ಕರೋನ ವನ್ನು ಸಂಪೂರ್ಣವಾಗಿ ನಿಯಂತ್ರಣ ಮಾಡಲು ಮುಂದಾಗಿದ್ದು ಬೆಂಗಳೂರಿನ ಮಾದರಿಯಲ್ಲಿಯೇ ಇಲ್ಲೂ ಕೂಡಾ ಸಧ್ಯ ಝಡ್ ಡಿಟೆಕ್ಟಿವ್ ಏಜೆನ್ಸಿ ಮೂಲಕ ಪ್ರಾಯೋಗಿಕವಾಗಿ ಐದು ಜನರನ್ನು ನೇಮಕ ಮಾಡಿಕೊಳ್ಳಲಾಗಿದೆ
ಸಧ್ಯ ಪ್ರಾಯೋಗಿಕ ವಾಗಿ ಐದು ಜನ ಮಾರ್ಸೆಲ್ ಗಳನ್ನು ನೇಮಕ ಮಾಡಲಾಗಿದ್ದು ಅವಳಿ ನಗರದಲ್ಲಿ ಇವರು ಪಾಲಿಕೆಯ ಸಿಬ್ಬಂದಿ ಗಳೊಂದಿಗೆ ಪಿಲ್ಡ್ ಗೆ ಇಳಿದು ಮಾಸ್ಕ್ ಹಾಕಲಾರದವರಿಗೆ ದಂಡ ವನ್ನು ಹಾಕಲಿದ್ದಾರೆ
ಪಾಲಿಕೆಯ ಸಿಬ್ಬಂದಿ ಗಳೊಂದಿಗೆ ಭದ್ರತೆ ಯಾಗಿ ಕೆಲಸವನ್ನು ಇವರು ಮಾಡಲಿದ್ದು ಒಟ್ಟಾರೆ ಇನ್ನೂ ಅವಳಿ ನಗರದಲ್ಲಿ ಮಾಸ್ಕ್ ಇಲ್ಲದೇ ತಿರುಗಾಡುವ ಮುನ್ನ ಮಾರ್ಸೆಲ್ ಗಳಿದ್ದಾರೆ ಎಂಬ ವಿಚಾರ ಗಮನಕ್ಕೆ ಇರಲಿ ಇಲ್ಲವಾದರೆ ದಂಡ ನಿಮಗೆ ಬೀಳಲಿದೆ.