ಹುಬ್ಬಳ್ಳಿ
ರೇಲ್ವೆ ಕಾಮಗಾರಿ ವೀಕ್ಷಿಸಲು ಹೋದ ಸಮಯದಲ್ಲಿ ಸಚಿವ ಜಗದೀಶ್ ಶೆಟ್ಟರ್ ಕೂದಲೇಳೆ ಅಂತರದಲ್ಲಿ ಪಾರಾದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಹೌದು ಹುಬ್ಬಳ್ಳಿಯ ದೇಶಪಾಂಡೆ ನಗರ ಹಾಗೂ ಭವಾನಿನಗರ ಮಧ್ಯೆ ಸಂಪರ್ಕ ಕಲ್ಪಿಸಲು ಕೃಷ್ಣಮಂದಿರ ಬಳಿ ಕೇಳ ಸೇತುವೆಯನ್ನು ನಿರ್ಮಿಸಲಾಗುತ್ತಿದೆ. ರೇಲ್ವೆ ಕೆಳಸೇತುವೆ ಕಾಮಗಾರಿಯನ್ನು ಬೃಹತ್, ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ್ ಶೆಟ್ಟರ್ ವೀಕ್ಷಿಸಿ ಪರಿಶೀಲಿಸಿದರು.
ಕೇಳ ಸೇತುವೆಯನ್ನು ನೋಡಿ ವೀಕ್ಷಿಸಿ ಪರಿಶೀಲನೆ ಮಾಡಿ ಹೊರಗೆ ಬರುವಷ್ಟರಲ್ಲಿ ಕಾಮಗಾರಿ ನಡೆಯುತ್ತಿದ್ದ ದೊಡ್ಡ ಮಣ್ಣಿನ ದಿಬ್ಬವೊಂದು ಕುಸಿದು ಬಿದ್ದಿದೆ. ಪಕ್ಕದಲ್ಲಿದ್ದ ಸಚಿವ ಜಗದೀಶ್ ಶೆಟ್ಟರ್ ಮತ್ತು ಬಿಜೆಪಿಯ ನಾಯಕರು ಮುಖಂಡರು ಕಾರ್ಯಕರ್ತರು ಕೂದಲೇಳೆ ಅಂತರದಲ್ಲಿಯೇ ಪಾರಾಗಿದ್ದಾರೆ,
ನಗರದ ದೇಶಪಾಂಡೆ ನಗರದ ರೇಲ್ವೆ ಕೆಳಸೇತುವೆ ಕಾಮಗಾರಿ ವೀಕ್ಷಣೆಯ ಸಮಯದಲ್ಲಿ ಈ ಒಂದು ಘಟನೆ ನಡೆದಿದೆ.ಸಚಿವ ಜಗದೀಶ್ ಶೆಟ್ಟರ್ ವೀಕ್ಷಣೆ ಸಮಯದಲ್ಲಿ ಕುಸಿದು ಬಿದ್ದ ಮಣ್ಣಿನ ದಿಬ್ಬವು ಸೇತುವೆಯ ಪಕ್ಕದಲ್ಲಿ ಕುಸಿದು ಬಿದ್ದಿದೆ.
ದೇಶಪಾಂಡೆ ನಗರ ಹಾಗೂ ಭವಾನಿನಗರ ಮಧ್ಯೆ ಸಂಪರ್ಕ ಕಲ್ಪಿಸಲು ಕೃಷ್ಣಮಂದಿರ ಬಳಿ ನಿರ್ಮಿಸಲಾಗುತ್ತಿರುವ ರೇಲ್ವೆ ಕೆಳಸೇತುವೆ ಕಾಮಗಾರಿ ಬಳಿ ಈ ಒಂದು ಘಟನೆ ನಡೆದಿದೆ. ಕೇಳ ಸೇತುವೆಯ ಕಾಮಗಾರಿಯನ್ನು ವೀಕ್ಷಣೆ ಮಾಡುವಾಗ ನಡೆದ ಘಟನೆಯಿಂದಾಗಿ ಸಚಿವರು ಸೇರಿದಂತೆ ಹಲವರು ಕೂದಲೇಳೆಯ ಅಂತರದಲ್ಲಿ ಪಾರಾಗಿದ್ದು ಕಂಡು ಬಂದಿತು.
ನಗರದ ದೇಶಪಾಂಡೆ ನಗರದಲ್ಲಿರುವ ಶ್ರೀಕೃಷ್ಣ ಕಲ್ಯಾಣ ಮಂಟಪದ ಪಕ್ಕದಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ಸಚಿವರು ಇಂದು ವೀಕ್ಷಣೆ ಮಾಡಲು ಬಂದ ಸಮಯದಲ್ಲಿ ಈ ಒಂದು ಘಟನೆ ನಡೆದಿದೆ.
ಕಾಮಗಾರಿ ವೀಕ್ಷಣೆ ಮಾಡುವ ಸಮಯದಲ್ಲಿ ಪಕ್ಕದಲ್ಲಿಯೇ ಕುಸಿದು ಬಿದ್ದ ದೊಡ್ಡ ಪ್ರಮಾಣದ ಮಣ್ಣಿನ ದಿಬ್ಬದಿಂದಾಗಿ ಸ್ವಲ್ಪದರಲ್ಲಿಯೇ ಸಚಿವ ಜಗದೀಶ್ ಶೆಟ್ಟರ್ ಮತ್ತು ಬಿಜೆಪಿಯ ನಾಯಕರು ಮುಖಂಡರು ಅಧಿಕಾರಿಗಳು ಪಾರಾದರು. ಸ್ಥಳಕ್ಕೇ ಪೊಲೀಸರು ಭೇಟಿ ಪರಿಶೀಲನೆ ಮಾಡುತ್ತಿದ್ದಾರೆ.