ಧಾರವಾಡ –
SSLC ಪರೀಕ್ಷೆ ಕುರಿತು ಶಾಸಕ ಅಮೃತ ದೇಸಾಯಿ ಧಾರವಾಡದಲ್ಲಿ ಕ್ಷೇತ್ರದ ಪೊಲೀಸ್ ಅಧಿಕಾರಿಗಳು ಮತ್ತು ಜಿಲ್ಲೆಯ ಶಿಕ್ಷಣ ಇಲಾಖೆ ಮತ್ತು BEO ಅವರೊಂದಿಗೆ ಸಭೆ ಮಾಡಿದರು.

ಮಹಾಮಾರಿ ಕರೋನ ದ ನಡುವೆ ಈಬಾರಿ ರಾಜ್ಯ ಸರ್ಕಾರ SSLC ಪರೀಕ್ಷೆ ಯನ್ನು ನಡೆಸುತ್ತಿದೆ. ಹೀಗಾಗಿ ಕ್ಷೇತ್ರದಲ್ಲಿನ ಪರೀಕ್ಷಾ ಕುರಿತು ಸಿದ್ದತೆ ಬಗ್ಗೆ ಸಭೆಯನ್ನು ಮಾಡಿದರು

DDPI ಮೋಹನ ಕುಮಾರ್ ಹಂಚಾಟೆ,BEO ಉಮೇಶ್ ಬೊಮ್ಮಕ್ಕನವರ,ತಹಶೀಲ್ದಾರ್ ಸಂತೋಷ ಬಿರಾದಾರ ಅವರೊಂದಿಗೆ ಶಾಸಕರು ಸಭೆ ಮಾಡಿ ಪರೀಕ್ಷೆ ಕುರಿತು ಚರ್ಚೆಯನ್ನು ಮಾಡಿದರು

ಇನ್ನೂ ಇವರೊಂದಿಗೆ ಪೊಲೀಸ್ ಧಾರವಾಡ ಗ್ರಾಮೀಣ, ಶಹರ,ಗರಗ ವೃತ್ತ,ಮತ್ತು ಶಹರ ಪೊಲೀಸ್ ಠಾಣೆ ಗಳ ಪೊಲೀಸ್ ಅಧಿಕಾರಿಗಳು ಈ ಒಂದು ಸಭೆಯಲ್ಲಿ ಪಾಲ್ಗೊಂಡು ಪರೀಕ್ಷೆ ಕುರಿತು ಕೈಗೊಂಡ ಸಿದ್ದತೆ ಬಗ್ಗೆ ಮಾಹಿತಿ ನೀಡಿದರು

ಈ ಅಧಿಕಾರಿಗಳೊಂದಿಗೆ ಶಾಸಕ ಅಮೃತ ದೇಸಾಯಿ ಅವರು ತುರ್ತಾಗಿ ಸಭೆ ಮಾಡಿ ಸಿದ್ದತೆಗಳ ಕುರಿತಂತೆ ಮಾಹಿತಿ ತಗೆದುಕೊಂಡು ಯಶಸ್ವಿಯಾಗಿ ಪರೀಕ್ಷೆ ಯನ್ನು ಮಾಡುವಂತೆ ಹೇಳಿದರು

ಅಲ್ಲದೇ ಪರೀಕ್ಷೆ ಗೆ ಏನಾದರೂ ನಮ್ಮಿಂದ ಸಹಾಯ ಬೇಕಾದರೆ ಕೇಳಿ ಖಂಡಿತವಾಗಿಯೂ ನೀಡುವುದಾಗಿ ಹೇಳಿದರು ಇದರೊಂದಿಗೆ ಕ್ಷೇತ್ರದಲ್ಲಿನ SSLC ಪರೀಕ್ಷೆ ಕುರಿತು ಶಾಸಕರು ಮಾಹಿತಿಯೊಂದಿಗೆ ಸಂಪೂರ್ಣವಾಗಿ ಚನ್ನಾಗಿ ಮಾಡೋಣ ಎಂದರು

ಈ ಮೂಲಕ ಶಾಸಕರು ಕ್ಷೇತ್ರದಲ್ಲಿನ ಪರೀಕ್ಷೆ ಕುರಿತು ಸಂಪೂರ್ಣವಾಗಿ ಮಾಹಿತಿಯೊಂದಿಗೆ ಕೆಲವೊಂ ದಿಷ್ಟು ಸಲಹೆ ಸೂಚನೆ ನೀಡಿದರು

ಮಂಜುನಾಥ ಸರ್ವಿ ಜೊತೆ ಪರಶುರಾಮ ಗೌಡರ ಸುದ್ದಿ ಸಂತೆ ನ್ಯೂಸ್ ಧಾರವಾಡ