ಧಾರವಾಡ –
ಧಾರವಾಡದ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ತಡರಾತ್ರಿಯೂ ಕ್ಷೇತ್ರದ ಜನರಿಗೆ ಸ್ಪಂದಿಸಿ ಧಾವಿಸಿದ್ದಾರೆ.ಹೌದು ಕಾಡು ಪ್ರಾಣಿಗಳ ದಾಳಿಯ ಕುರಿತಂತೆ ಮತ್ತೆ ಧಾರವಾಡದ ಗೋವನಕೊಪ್ಪ ಗ್ರಾಮದಲ್ಲಿ ತಡರಾತ್ರಿ ಕಾಡುಪ್ರಾಣಿಗಳ ಸದ್ದು ಕೇಳಿ ಬಂದಿದ್ದು ಕಾಣಿಸಿ ಕೊಂಡ ಹಿನ್ನಲೆಯಲ್ಲಿ ಕೂಡಲೇ ಗ್ರಾಮಸ್ಥರು ಮಧ್ಯರಾತ್ರಿ ಎನ್ನದೇ ಶಾಸಕರಿಗೆ ದೂರವಾಣಿ ಕರೆಯನ್ನು ಮಾಡಿದ್ದಾರೆ ಜನರು ದೂರವಾಣಿ ಕರೆ ಮಾಡುತ್ತಿದ್ದಂತೆ ಅವರ ಕರೆಗೆ ಸ್ಪಂದನೆ ಮಾಡಿದ ಶಾಸಕ ಅಮೃತ ದೇಸಾಯಿ ಕೂಡಲೇ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಪೊನ್ ಮಾಡಿ ತಿಳಿಸಿದರು.ಗೋವನಕೊಪ್ಪ ಗ್ರಾಮದಲ್ಲಿ ಮತ್ತೆ ಕಾಡುಪ್ರಾ ಣಿಗಳು ಕಾಣಿಸಿಕೊಂಡಿವೆ

ಇದರಿಂದಾಗಿ ಗ್ರಾಮಸ್ಥರ ಕರೆಗೆ ಸ್ಪಂದಿಸಿ ಕೂಡಲೇ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಸ್ಥಳಕ್ಕೆ ಹೋಗುವಂತೆ ಸೂಚನೆ ನೀಡಿದರು ಶಾಸಕರು ಇನ್ನೂ ಯಾವುದೇ ಕಾರಣಕ್ಕೂ ತಡವನ್ನು ಮಾಡದೇ ಕಾರ್ಯಾಚರಣೆ ಮಾಡುವಂತೆ ಶಾಸಕರಿಂದ ಸೂಚನೆ ಸಿಕ್ಕಿದೆ ಹಾಗೇ ಧೈರ್ಯದಿಂದ ಇರುವಂತೆ ಗೋವನಕೊಪ್ಪ ಗ್ರಾಮಸ್ಥರಿಗೆ ಸೂಚನೆಯನ್ನು ನೀಡಿದ್ದಾರೆ ಶಾಸಕರು. ಇನ್ನೂ ಯಾವಾಗಲೂ ಪೊನ್ ರಿಸೀವ್ ಮಾಡೊದಿಲ್ಲ ಎನ್ನುವವರಿಗೆ ಇದರೊಂದಿಗೆ ಉತ್ತರಿಸಿದ್ದಾರೆ ಶಾಸಕರು