ಧಾರವಾಡ –
ಸುದ್ದಿ ಸಂತೆಯ ವರದಿಯೊಂದಕ್ಕೆ ಕೊನೆಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸ್ಪಂದಿಸಿದ್ದಾರೆ. ನವಲಗುಂದ ಪಟ್ಟಣದಲ್ಲಿ ಮಾಜಿ ಸೈನಿಕ ಗಿರಿಯಪ್ಪ ದೇವರಡ್ಡಿ ಎಂಬುವರು ತಮ್ಮ ಮನೆಯನ್ನು ಪೊಲೀಸ್ ಪೇದೆ ಗಿರಿಯಪ್ಪ ಮಾದರ ಎಂಬುವರೆಗೆ ಬಾಡಿಗೆ ಕೊಟ್ಟಿದ್ದರು. ಬಾಡಿಗೆ ಮನೆಯನ್ನು ತಗೆದುಕೊಂಡು ಕುಟುಂಬ ಸಮೇತರಾಗಿ ಮನೆಯಲ್ಲಿ ವಾಸಿಸುತ್ತಿದ್ದ ಯಶವಂತ ಹೆಂಡತಿ ಮಕ್ಕಳನ್ನು ಬಿಟ್ಟು ಮನೆಯತ್ತ ಕುಟುಂಬದತ್ತ ಸುಳಿದಿರಲಿಲ್ಲ.ಬಾಡಿಗೆ ಯನ್ನಾದರೂ ಕೊಡಿ ಇಲ್ಲವೇ ಮನೆಯಲ್ಲಿ ಖಾಲಿ ಮಾಡಿ ಎಂದು ಮನೆಯ ಮಾಲೀಕರಾದ ಗಿರಿಯಪ್ಪ ದೇವರಡ್ಡಿ ಅವರು ಪೊಲೀಸಪ್ಪನಿಗೆ ಕೇಳಿ ಕೇಳಿ ಬೇಸತ್ತಿದ್ದರು. ಎಂಟು ತಿಂಗಳಿನಿಂದ ತಮ್ಮ ಮನೆಯನ್ನು ತಾವು ಪಡೆದುಕೊಳ್ಳಲು ಸಿಕ್ಕಾಪಟ್ಟಿ ನರಕಯಾತನೆಯನ್ನು ಅನುಭವಿಸಿದ್ದರು.

ಇದಕ್ಕೂ ಸ್ಪಂದಿಸದ ಪೊಲೀಸಪ್ಪನ ವಿರುದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನೆಯ ಮಾಲೀಕರು ದೂರನ್ನು ನೀಡಿದ್ದರು. ದೂರು ನೀಡಿದ ಬೆನ್ನಲ್ಲೇ ಸುದ್ದಿ ಸಂತೆ ಈ ಕುರಿತಂತೆ ವರದಿಯನ್ನು ಪ್ರಕಟ ಮಾಡಿತ್ತು. ವರದಿಗೆ ಸ್ಪಂದಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪೊಲೀಸಪ್ಪನಿಗೆ ಖಡಕ್ ಸಂದೇಶ ನೀಡಿದ್ದಾರೆ. ಹೀಗಾಗಿ ಮೇಲಾಧಿಕಾರಿಗಳಿಂದ ಎಚ್ಚೆತ್ತುಕೊಂಡ ಪೊಲೀಸ್ ಪೇದೆ ಯಶವಂತ ಮಾದರ ತಮ್ಮ ತಂದೆಯವರನ್ನು ಕಳಿಸಿಕೊಟ್ಟು ಮನೆಯಲ್ಲಿನ ಎಲ್ಲಾ ಲಗೇಜ್ ಗಳನ್ನು ತಗೆದುಕೊಂಡು ಮನೆಯನ್ನು ಮಾಲೀಕರಿಗೆ ಒಪ್ಪಿಸಿದ್ದಾರೆ.

ಎಂಟು ತಿಂಗಳಿನಿಂದ ಮನೆ ಇಲ್ಲದೇ ಬಾಡಿಗೆ ಇಲ್ಲದೇ ಪರದಾಡುತ್ತಿದ್ದ ಮನೆಯ ಮಾಲೀಕರಾದ ಗಿರಿಯಪ್ಪ ದೇವರಡ್ಡಿ ಯವರಿಗೆ ತಮ್ಮ ಮನೆ ತಮಗೆ ಬರುತ್ತಿದ್ದಂತೆ ಸಂತಸಗೊಂಡಿದ್ದಾರೆ. ಸ್ಪಂದಿಸಿದ ನವಲಗುಂದ ಇನಸ್ಪೇಕ್ಟರ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಧನ್ಯವಾದಗಳನ್ನು ಹೇಳಿದ್ದಾರೆ.ಇನ್ನೂ ಸುದ್ದಿ ಸಂತೆಯ ವರದಿಯೊಂದಕ್ಕೆ ಸ್ಪಂದಿಸಿದ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಧನ್ಯವಾದಗಳು. ಇದೇ ಜನಸ್ನೇಹಿ ಕಾರ್ಯವಾಗಿದೆ.