ಹುಬ್ಬಳ್ಳಿ –
ಅಖಿಲ ಭಾರತ ಶಿಕ್ಷಕರ ಮಹಾಮಂಡಳದ ಮಾಜಿ ಉಪಾಧ್ಯಕ್ಷರು,ಅಖಿಲ ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿಗಳಾಗಿ ದೀರ್ಘ ಅವಧಿಯಲ್ಲಿ ಕಾರ್ಯನಿರ್ವಹಿಸಿದ್ದ ಬಿ ಎಫ್ ವಿಜಾಪುರ (ಬಸವಂತಪ್ಪ ಫಕೀರಪ್ಪ ವಿಜಾಪುರ)ರವರು ಹುಬ್ಬಳ್ಳಿಯ ವಿಶ್ವೇಶ್ವರ ನಗರದ ಸ್ವಗೃಹ ಅಲ್ಪ ಕಾಲಿನ ಅನಾರೋಗ್ಯದಿಂದ ನಿಧನರಾಗಿದ್ದಾರೆ.ಅಲ್ಲಿಯೇ ಅಂತ್ಯ ಸಂಸ್ಕಾರ ನೆರವೇರಿತು,ರಾಜಕೀಯ,ಸಾಮಾಜಿಕ,ಶೈಕ್ಷಣಿಕ ವಲಯದ ಗಣ್ಯರು ಅಂತಿಮ ನಮನ ಸಲ್ಲಿಸಿದರು

ಇಬ್ಬರು ಸುಪುತ್ರರು ಸುಪುತ್ರಿಯರು ಸೇರಿದಂತೆ ನಾಡಿನಾ ದ್ಯಂತ ಅಪಾರ ಶಿಷ್ಯ ವರ್ಗ,ಶಿಕ್ಷಕರ ಸಂಘದ ಒಡನಾಡಿ ಗಳನ್ನು ಅಗಲಿರುವರು
1960ರ ದಶಕದಲ್ಲಿ ಶಿಕ್ಷಕರ ಹಿತರಕ್ಷಣೆ ಗಾಗಿ ಹಾಗೂ ಶೈಕ್ಷಣಿಕ ರಂಗದ ಸುಧಾರಣೆಗಾಗಿ ಶ್ರಮಿಸಿದ್ದರು ಶಿಕ್ಷಕರ ಪರ ಕಾಳಜಿಯಿಂದ ಹೆಸರು ಗಳಿಸಿದ್ದರು.ಅಖಿಲ ಭಾರತ ಶಿಕ್ಷಕ ಮಹಾಮಂಡಳ ಹಾಗೂ ಎಜ್ಯುಕೇಶನ್ ಇoಟರ್ ನ್ಯಾಷನಲ್ ವತಿಯಿಂದ ಜರುಗಿದ ದೇಶ ಹಾಗೂ ಅಂತರಾ ಷ್ಟ್ರೀಯ ಮಟ್ಟದ ಹಲವಾರು ಸಭೆ,ಸಮಾರಂಭಗಳಲ್ಲಿ, ಕಾರ್ಯಾಗಾರ ಗಳಲ್ಲಿ ಕರ್ನಾಟಕದ ಪ್ರತಿನಿಧಿಯಾಗಿ ಭಾಗವಹಿಸಿದ್ದರು 30ಕ್ಕೂ ಹೆಚ್ಚು ವರ್ಷಗಳ ಕಾಲ ಅಖಿಲ ಭಾರತ ಶಿಕ್ಷಕರ ಮಹಾಮಂಡಳದ ಪದಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದ್ದರು 2013ರಲ್ಲಿ ಅವರ 81 ನೆಯ ಹುಟ್ಟುಹಬ್ಬದ ಸಮಯದಲ್ಲಿ ನಾಡಿನ ಖ್ಯಾತ ಕಾರ್ಮಿಕ ನಾಯಕರಾದ ಡಾ, ಕೆ ಎಸ್ ಶರ್ಮಾ ರವರ ಪ್ರಧಾನ ಸಂಪಾದಕತ್ವದಲ್ಲಿ ಬಸವಂತ ಸೌಜನ್ಯ ಸೌರಭ ಎಂಬ ಅಭಿನಂದನಾ ಗ್ರಂಥ ಅರ್ಪಿಸಿ ಗೌರವಿಸಲಾಗಿತ್ತು,ಅದರಲ್ಲಿ ಬಸವರಾಜ ಸುಣಗಾರ ಸೇರಿದಂತೆ ಹಲವಾರು ಗಣ್ಯರು ವಡನಾಟದ ಅನುಭವ ಬರೆದು ಅಭಿನಂದನೆ ಸಲ್ಲಿಸಿದರು,
ಮಾರ್ಗದರ್ಶನ ಮಾಡಿ ಶಿಕ್ಷಕರ ಸಂಘಟನೆಯಲ್ಲಿ ಕಾರ್ಯ ನಿರ್ವಹಿಸಲು ಅನವು ಮಾಡಿಕೊಟ್ಟಿದ್ದ ಹಿರಿಯರಾದ ಬಿ ಎಫ್ ವಿಜಾಪುರ ರವರ ನಿಧನಕ್ಕೆ ಅಖಿಲ ಕರ್ನಾಟಕ ಪ್ರಾಥಮಿಕ ಶಿಕ್ಷಕರ ಸಂಘದ ಮಾಜಿ ರಾಜ್ಯ ಘಟಕದ ಅಧ್ಯಕ್ಷರಾದ ಬಸವರಾಜ ಸುಣಗಾರ,ಮಾಜಿ ಪ್ರಧಾನ ಕಾರ್ಯದರ್ಶಿ ಕೆ ಎ ಕೃಷ್ಣಪ್ಪ, ಮಾಜಿ ಸಂಘಟನಾ ಕಾರ್ಯ ದರ್ಶಿ ಜಿ ಸುರೇಶ ರವರು ಸೇರಿದಂತೆ ಹಲವು ಶಿಕ್ಷಕರ ಸಂಘದ ಪದಾಧಿಕಾರಿಗಳು,ಅಭಿಮಾನಿಗಳು,ನಾಡಿನ ಶಿಕ್ಷಕರು ತೀವ್ರ ಶೋಕ ವ್ಯಕ್ತ ಅವರ ಆತ್ಮಕ್ಕೆ ಚಿರಶಾಂತಿ ಬಯಸಿದ್ದಾರೆ