ಬೆಂಗಳೂರು –
ಈಗಾಗಲೇ 6ನೇ ವೇತನದ ಅವಧಿ ಮುಕ್ತಾಯ ಗೊಂಡಿದ್ದು ಹೀಗಾಗಿ ಸಧ್ಯ ರಾಜ್ಯದ ಸರ್ಕಾರಿ ನೌಕರಿಗಾಗಿ ವೇತನ ಪರಿಷ್ಕ್ರರಣೆ ಮಾಡುವ ಕುರಿತಂತೆ 7ನೇ ವೇತನ ಆಯೋಗವನ್ನು ರಚನೆ ಮಾಡಲಾಗಿದ್ದು ಹೀಗಾಗಿ ಸಧ್ಯ ಈ ಒಂದು ಸಮಿತಿಯೂ ಕೂಡಾ ಕಾರ್ಯ ಚಟುವಟಿಕೆಗ ಳನ್ನು ಆರಂಭ ಮಾಡಿದೆ.
ಈಗಾಗಲೇ ಸಮಿತಿಯೂ ಕೂಡಾ ಸಾಲು ಸಾಲಾಗಿ ಬರುವ ಚುನಾವಣೆಗಳನ್ನು ಗಮನ ದಲ್ಲಿಟ್ಟುಕೊಂಡು ಕಾರ್ಯ ಚಟುವಟಿಕೆಗಳನ್ನು ಆರಂಭ ಮಾಡಿದ್ದು ಒಂದೊಂದಾಗಿ ಕೆಲಸ ಕಾರ್ಯಗಳು ಕೂಡಾ ನಡೆಯುತ್ತಿವೆ.ಇವೆಲ್ಲದರ ನಡುವೆ 7ನೇ ವೇತನದಲ್ಲಿ ಸರ್ಕಾರಿ ನೌಕರರ ವೇತನ ಶ್ರೇಣಿ, ತುಟ್ಟಿ ಭತ್ಯೆಯೂ ಹೇಗೆ ಇರುತ್ತದೆ ಎಂಬ ಕುರಿತಂತೆ ನೊಡೋದಾದರೆ
ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ್ ರಾವ್ ನೇತೃತ್ವದಲ್ಲಿ ಕರ್ನಾಟಕ ಸರ್ಕಾರ ರಚನೆ ಮಾಡಿರುವ 7ನೇ ರಾಜ್ಯ ವೇತನ ಆಯೋಗ ಹಲವು ಅಂಶಗಳ ಪರಿಶೀಲನೆ ನಡೆಸುತ್ತಿದೆ.ಇದಕ್ಕಾಗಿ ಸರ್ಕಾರಿ ನೌಕರರು ಸೇರಿ ದಂತೆ ಜನರಿಂದಲೂ ಸಹ ಅಭಿಪ್ರಾಯಗಳನ್ನು ಸಂಗ್ರಹ ಮಾಡುತ್ತಿದೆ.ಅಭಿಪ್ರಾಯ ಸಂಗ್ರಹ ಮಾಡಲು ಮೊದಲ ಹಂತದಲ್ಲಿ ಸಾರ್ವಜನಿಕರು ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು, ಮಾನ್ಯತೆ ಪಡೆದ ನೌಕರರ ಸಂಘಗಳು, ವಿಶ್ವ ವಿದ್ಯಾಲಯಗಳು, ಸ್ಥಳೀಯ ಸಂಸ್ಥೆಗಳು ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳಿಂದ ಪ್ರತಿಕ್ರಿಯೆ ಗಳನ್ನು ಆಹ್ವಾನಿಸಿ ಪ್ರಶ್ನಾವಳಿಗಳನ್ನು ರಾಜ್ಯಪತ್ರ ದಲ್ಲಿ ಪ್ರಕಟಿಸಿದೆ.
ಈ ಪ್ರಶ್ನಾವಳಿಗಳಿಗೆ ಅಭಿಪ್ರಾಯಗಳನ್ನು, ಮನವಿ ಯನ್ನು ಸದಸ್ಯ ಕಾರ್ಯದರ್ಶಿ 7ನೇ ರಾಜ್ಯ ವೇತನ ಆಯೋಗ,3ನೇ ಮಹಡಿ, ಔಷಧ ನಿಯಂತ್ರಣ ಇಲಾಖೆಯ ಕಟ್ಟಡ, ಅರಮನೆ ರಸ್ತೆ, ಬೆಂಗಳೂರು – 560001 ವಿಳಾಸಕ್ಕೆ 10/02/2023 ಅಥವಾ ಅದಕ್ಕೂ ಮುನ್ನ ತಲುಪುವಂತೆ ಕಳುಹಿಸಲು ಮನವಿ ಮಾಡಲಾ ಗಿದೆ.
ಈ ಪ್ರಶ್ನಾವಳಿಗಳಲ್ಲಿ ವೇತನ ಆಯೋಗ ಯಾವ-ಯಾವ ಅಂಶಗಳನ್ನು ಪರಿಶೀಲನೆ ಮಾಡಲಿದೆ. ಪ್ರಸ್ತುತ ಇರುವ ನಿಯಮಗಳೇನು ಎಂದು ವಿವರ ನೀಡಲಾಗಿದೆ. ವಿವಿಧ ಹಂತದ ಅಧಿಕಾರಿಗಳು ಇವುಗಳಿಗೆ ಅಭಿಪ್ರಾಯಗಳನ್ನು ತಿಳಿಸಬಹುದು, ಜನರು ಸಹ ತಮ್ಮ ಅಭಿಪ್ರಾಯ ಸಲ್ಲಿಕೆ ಮಾಡಲು ಅವಕಾಶ ನೀಡಲಾಗಿದೆ.ಇನ್ನು ಈ ಪ್ರಶ್ನಾವಳಿ ರಾಜ್ಯಪತ್ರದ ಅನ್ವಯ ಸರ್ಕಾರದ ಒಟ್ಟು ಇಲಾಖೆ ಗಳು 43. ಮಂಜೂರಾದ ಹುದ್ದೆಗಳು 7,69,981. ಕಾರ್ಯ ನಿರ್ವಹಣೆ ಮಾಡುತ್ತಿರುವ ಹುದ್ದೆಗಳು 5,11,272 ಮತ್ತು ಖಾಲಿ ಇರುವ ಹುದ್ದೆಗಳು 2,58,709 ಆಗಿದ್ದು ಇವೆಲ್ಲವುಗಳ ಮಾಹಿತಿ ಯನ್ನು ಪಡೆದುಕೊಂಡು ಸಧ್ಯ ಇರುವ ವೇತನ ಶ್ರೇಣಿ ಮತ್ತು ತುಟ್ಟಿ ಭತ್ಯೆ ಕುರಿತಂತೆ ಮಾಹಿತಿ ಆಧಾರದ ಮೇಲೆ ರಾಜ್ಯ ಸರ್ಕಾರಿ ನೌಕರರ ವೇತನ ಶ್ರೇಣಿ ಮತ್ತು ತುಟ್ಟಿ ಭತ್ಯೆಯನ್ನು ಸಮಿ ತಿಯೂ ನಿರ್ಧಾರವನ್ನು ಮಾಡಿ
ವರದಿಯಲ್ಲಿ ಉಲ್ಲೇಖ ಮಾಡಲಿದೆ.ಹೀಗಾಗಿ ಸಧ್ಯ ಈ ಒಂದು ಕಾರ್ಯವೂ ಕೂಡಾ ನಡೆಯು ತ್ತಿದ್ದು ಎಷ್ಟೇಷ್ಟು ವೇತನ ಶ್ರೇಣಿ ಮತ್ತು ತುಟ್ಟಿ ಭತ್ಯೆ ಆಗಲಿದೆ ಎಂಬೊದನ್ನು ಕಾದು ನೋಡಬೇಕಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..