ಬೆಳಗಾವಿ –
ಸಿಟಿ ಕಂಪೋಸ್ಟ್ ಮಾರ್ಕೆಟ್ ಲೈಸನ್ಸ್ ನೀಡಲು 20 ಸಾವಿರ ರೂ ಲಂಚ ಪಡೆಯುತ್ತಿದ್ದ ಕೃಷಿ ಇಲಾಖೆಯ ಅಧಿಕಾರಿ ಯೊಬ್ಬರು ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಬಲೆಗೆ ಬಿದ್ದ ಘಟನೆ ಬೆಳಗಾವಿ ಯಲ್ಲಿ ನಡೆದಿದೆ.ಬೆಳಗಾವಿ ಜಂಟಿ ಕೃಷಿ ನಿರ್ದೇಶಕರ ಕಚೇರಿಯ ಕೃಷಿ ಅಧಿಕಾರಿ ಯೋಗೇಶ ಫಕೀರೇಶ ಅಗಡಿ ಎಸಿಬಿ ಬಲೆಗೆ ಬಿದ್ದವರಾಗಿದ್ದು ಕಚೇರಿ ಯಲ್ಲಿ 44 ಸಾವಿರ ರೂ.ಹಾಗೂ ಮನೆಯಲ್ಲಿ ಶೋಧ ನಡೆಸಿದಾಗ 3.54 ಲಕ್ಷ ರೂ ಪತ್ತೆಯಾಗಿದೆ
ಅನಗೋಳದ ಮೌನೇಶ್ವರ ಕಮ್ಮಾರ ಎಂಬವರು ಸಿಟಿ ಕಂಪೋಸ್ಟ್ ಮಾರ್ಕೆಟ್ ಲೈಸನ್ಸ್ ಪಡೆಯಲು ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿದ್ದರು.ಇದನ್ನು ಅಪ್‌ಲೋಡ್ ಮಾಡಲು ಕೃಷಿ ಅಧಿಕಾರಿ ಅಗಡಿ 30 ಸಾವಿರ ರೂಪಾಯಿ ಲಂಚ ಕೇಳಿದ್ದರು.ಮುಂಗಡವಾಗಿ 20 ಸಾವಿರ ರೂ.ಲಂಚ ಪಡೆ ಯುವಾಗ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.ಎಸಿಬಿ ಎಸ್ ಪಿ ಬಿ.ಎಸ್. ನೇಮಗೌಡ ಮಾರ್ಗದರ್ಶನದಲ್ಲಿ ಡಿಎಸ್ ಪಿ ಜೆ.ಎಂ. ಕರುಣಾಕರ ಶೆಟ್ಟಿ, ಇನ್ಸ್ಪೆಕ್ಟರ್ ಗಳಾದ ಎ.ಎಸ್.ಗೂದಿಗೊಪ್ಪ,ನಿರಂಜನ ಪಾಟೀಲ ಹಾಗೂ ಸಿಬ್ಬಂದಿ ದಾಳಿ ನಡೆಸಿದ್ದರು.