ಬೆಂಗಳೂರು –
ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ಕೇಂದ್ರ ಮಾದರಿಯ ವೇತನವನ್ನು ಜಾರಿಗೊಳಿಸಲು ಸಮಿತಿ ರಚಿಸುವ ಬಗ್ಗೆ ವಿಧಾನಸಭೆಯ ಅಧಿವೇಶನದಲ್ಲಿ ಮುಖ್ಯಮಂತ್ರಿ ಬಸವ ರಾಜ ಬೊಮ್ಮಾಯಿ ಕೊನೆಗೂ ಮಾತನಾಡಿದ್ದಾರೆ.ಹೌದು ಇಂದು ಸದನದಲ್ಲಿ ಈ ಒಂದು ಕುರಿತು ಮಾತನಾಡಿದ ಅವರು ರಾಜ್ಯದ ಸರ್ಕಾರಿ ನೌಕರರ ಕುರಿತು ಮೆಚ್ಚುಗೆಯ ಮಾತನ್ನು ಹೇಳಿ ಸಮಿತಿ ರಚನೆ ಕುರಿತು ಉಲ್ಲೇಖವನ್ನು ಮಾಡಿದರು

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು ಬಜೆಟ್ ಮೇಲಿನ ಚರ್ಚೆ ಯಲ್ಲಿ ಉತ್ತರಿಸುತ್ತಾ ಕೇಂದ್ರ ಮಾದರಿ ವೇತನವನ್ನು ರಾಜ್ಯ ಸರ್ಕಾರಿ ನೌಕರರಿಗೆ ನೀಡಲು ಅಧಿಕಾರಿಗಳ ವೇತನ ಸಮಿತಿಯನ್ನು ರಚಿಸುವುದಾಗಿ ತಿಳಿಸಿದ್ದಾರೆ.
ಅತ್ತ ಮಂತ್ರಿಗಳಿಂದ ಸಂತೋಷದ ಸುದ್ದಿ ಸಿಗುತ್ತಿದ್ದಂತೆ ಇತ್ತ ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ವಿಜಯೋತ್ಸವ ಆಚರಣೆ ಮಾಡಲಾಯಿತು ಪಟಾಕಿ ಸಿಡಿಸಿ ಸಂಭ್ರಮಿಸ ಲಾಯಿತು ಅಲ್ಲದೇ ಸಮಸ್ತ ರಾಜ್ಯದ ಸರ್ಕಾರಿ ನೌಕರರ ಪರವಾಗಿ ರಾಜ್ಯಾಧ್ಯಕ್ಷ ಷಡಕ್ಷಾರಿ ಅವರು ಧನ್ಯವಾದಗಳ ನ್ನು ಹೇಳಿದರು


ಈ ಕಾರ್ಯಕ್ಕೆ ಅವಿರತವಾಗಿ ಶ್ರಮಿಸಿದ ಹೆಮ್ಮೆಯ ರಾಜ್ಯಾಧ್ಯಕ್ಷರಿಗೆ ಬೆಂಗಳೂರು ರಾಜ್ಯ ಪರಿಷತ್ ಸದಸ್ಯರು ಪಟಾಕಿಸಿಡಿಸಿ ಗೌರವ ಸಮರ್ಪಿಸಿದರು ನಮ್ಮ ಷಡಾಕ್ಷರಿ ನಮ್ಮ ಹೆಮ್ಮೆ ಎಂಬ ಘೋಷಣೆ ಕೂಗಿ ಸಂತಸವನ್ನು ವ್ಯಕ್ತಪಡಿಸಿದರು