ಹುಬ್ಬಳ್ಳಿ ಧಾರವಾಡ –
ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಇಂದು ಹುಬ್ಬಳ್ಳಿಯಲ್ಲಿ ತುರ್ತು ಸಭೆ ಸೇರಿ ನಮ್ಮ ಶಿಕ್ಷಕ ಬಂದುಗಳಾದ ಜನಪದ ಕಲಾವಿದರು, ಮುತ್ಸದ್ದಿ ಶಿಕ್ಷಕರು, ಹಮಾಲರ ಮಕ್ಕಳಿಗೆ ಅಕ್ಷರದ ಬೆಳಕನ್ನು ನೀಡಿ ಅವರ ಕಲಿಕೆಗೆ ಸಾಕಷ್ಟು ಶ್ರಮವಹಿಸಿದ ರಾಮೂ ಮೂಲಗಿ ಈ ಸಲ ಧಾರವಾಡ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಅದ್ಯಕ್ಷ ಸ್ಥಾನಕ್ಕೆ ಸ್ಪರ್ದಿಸಲು ಅಪೇಕ್ಷಿಸಿದ್ದಾರೆ.

ಜಿಲ್ಲೆಯ ಸಮಸ್ತ ಶಿಕ್ಷಕ ಬಂಧುಗಳು ಆ ಸಂಘ ಈ ಸಂಘ ಅಂತ ಲೆಕ್ಕ ಹಾಕದೇ ರಾಮೂ ಮೂಲಗಿ ಅವರ ಗೆಲುವಿಗೆ ಶ್ರಮಿಸಲು ರಾಜ್ಯಾದ್ಯಕ್ಷರಾದ ಅಶೋಕ ಸಜ್ಜನ ಕರೆ ನೀಡಿದರು, ಇದೇ ಸಂದರ್ಭ ದಲ್ಲಿ ಮಾತನಾಡಿದ ಅವರ ಡಾ, ಲಿಂಗರಾಜ ಅಂಗಡಿ ಸಹ ಒಳ್ಳೆಯವರು, ಅವರು ಸಾಕಷ್ಟು ಒಳ್ಳೆಯ ಕೆಲಸ ಮಾಡಿದ್ದಾರೆ, ಆದರೆ ಈ ಸಲ ನಮ್ಮ ಪ್ರಾಥಮಿಕ ಶಾಲಾ ಶಿಕ್ಷಕರಿಗೂ ಒಂದು ಅವಕಾಶ ಸಿಗಲಿ ಅಂತ ತಿಳಿಸಿದರು

ಗೌರವಾದ್ಯಕ್ಷರು ಎಲ್ ಐ ಲಕ್ಕಮ್ಮನವರ, ಕಾರ್ಯಾ ದ್ಯಕ್ಷರು ಶರಣಪ್ಪಗೌಡ ಕೋಶಾದ್ಯಕ್ಷರು ಎಸ್ ಎಫ್ ಪಾಟೀಲ ಜಿಲ್ಲಾ ಅದ್ಯಕ್ಷ ಅಕ್ಬರಲಿ ಸೋಲಾಪುರ, ನವಲಗುಂದ ತಾಲೂಕು ಅದ್ಯಕ್ಷ ಎಸ್ ಸಿ ಹೊಳೆಯ ಣ್ಣನವರ ಕಾರ್ಯದರ್ಶಿ ಬಿ ಬಿ ಅಂಗಡಿ, ಗೌರವಾದ್ಯ ಕ್ಷರು ಚಿಪ್ಪಾಡಿ, ಜುಜಾರೆ, ಬಂಡಿವಡ್ಡರ್ ಸೇರಿದಂತೆ ರಾಜ್ಯ ಜಿಲ್ಲೆಯ ಪ್ರಮುಖ ಶಿಕ್ಷಕರು ಹಾಜರಿದ್ದರು, ಇದೇ ಸಂದರ್ಭದಲ್ಲಿ ಆ ಹಾಜರಿದ್ದ ಸಾಹಿತ್ಯ ಪರಿಷತ್ತಿನ ಧಾರವಾಡ ಜಿಲ್ಲಾ ಅಧ್ಯಕ್ಷ ಸ್ಥಾನದ ಅಕಾಂಕ್ಷಿ ರಾಮೂ ಮೂಲಗಿ ಗ್ರಾಮೀಣ ಶಿಕ್ಷಕರ ಸಂಘ ಸೇರಿದಂತೆ ಜಿಲ್ಲೆಯ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಸಾವಿತ್ರಿ ಬಾ ಪುಲೆ ಶಿಕ್ಷಕಿಯರ ಸಂಘ, ದೈಹಿಕ ಶಿಕ್ಷಣ ಶಿಕ್ಷಕರ ಸಂಘ, ಮೇವಾ ಸಂಘ, ಎಸ್ ಸಿ ಎಸ್ ಟಿ ಶಿಕ್ಷಕರ ಸಂಘ, ಪದವೀಧರ ಶಿಕ್ಷಕರ ಸಂಘ, ಮುಖ್ಯೋಪಾಧ್ಯಾಯರ ಸಂಘ ಸೇರಿದಂತೆ ಜಿಲ್ಲೆಯ ಎಲ್ಲಾ ಶಿಕ್ಷಕರ ಸಂಘಗಳು, ಜೊತೆಗೆ ಹಿತಿಯ ಚಿಂತಕರು, ಸಾಹಿತಿಗಳು, ಬರಹಗಾರರು, ಪತ್ರಕರ್ತರು ಎಲ್ಲಾ ವರ್ಗದ ಜನರ ಆಶೀರ್ವಾದ ನನಗೆ ಇರಲಿ ಅಂತ ವಿನಂತಿಸಿದರು.