ಧಾರವಾಡ –
ರಾಜ್ಯಮಟ್ಟದ ವೆಬಿನಾರ್ ಸಂಪೂರ್ಣ ಹೌಸ್ ಫುಲ್ ಭಾಗವಹಿಸಲು ಸಾದ್ಯವಾಗದೆ ನೂರಾರು ಶಿಕ್ಷಕ,ಶಿಕ್ಷಕಿ ಯರಿಗೆ ಭಾರಿ ನಿರಾಸೆ ಹೌದು
ದಿನಾಂಕ 1.5.2022 ನೇ ಭಾನುವಾರ ಸಂಜೆ 4 ಗಂಟೆಗೆ ಮೈಕ್ರೋಸಾಫ್ಟ್ Team app ಮೂಲಕ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ.ಲತಾ ಎಸ್ ಮುಳ್ಳೂರವರ ನೇತೃತ್ವ ದಲ್ಲಿ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಕಲಿಕಾ ಚೇತರಿಕೆ ವಿಷಯ ಕುರಿತ ರಾಜ್ಯ ಮಟ್ಟದ ವೇಬಿ ನರ್ ಸಂವಾದ ಹಾಗೂ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ಮೈಕ್ರೋ ಸಾಪ್ಟ್ ಆಪ್ ಮೂಲಕ ನಡೆದ ವೆಬಿನಾರ್ ನಲ್ಲಿ 1000+ ಶಿಕ್ಷಕ ಶಿಕ್ಷಕಿಯರು ಭಾಗವ ಹಿಸಿ ಸಂಪೂರ್ಣ ಭಾಗವಹಿಸುವಿಕೆಯ ಲಿಮಿಟ್ ಮೀರಿದ್ದ ಕಾರಣಕ್ಕೆ ನೂರಾರು ಶಿಕ್ಷಕ ಶಿಕ್ಷಕಿಯರಿಗೆ ಭಾಗವಹಿಸಲು ಸಾಧ್ಯವಾಗದೇ ಬಾರಿ ನಿರಾಸೆ ಅನುಭವಿಸುವಂತಾಯಿತು
ಕಳೆದ ಶೈಕ್ಷಣಿಕ ಎರಡು ವರ್ಷಗಳಲ್ಲಿ ಕರೋನದ ಹಾವಳಿ ಯಿಂದಾಗಿ ಮಕ್ಕಳ ಶೈಕ್ಷಣಿಕ ಪ್ರಗತಿ ಕುಂಠಿತವಾಗಿದ್ದು ಪ್ರಸಕ್ತ 2022 -23ನೇ ವರ್ಷವನ್ನು ಕಲಿಕಾ ಚೇತರಿಕೆಯ ವರ್ಷವನ್ನಾಗಿ ಕರ್ನಾಟಕ ಸರ್ಕಾರದ ಸಾರ್ವಜನಿಕ ಶಿಕ್ಷಣ ಇಲಾಖೆ ಘೋಷಿಸಿದೆ.ಆದ ಕಾರಣ ಕಲಿಕಾ ಚೇತರಿಕೆ ಕಾರ್ಯಕ್ರಮದ ರೂಪರೇಷೆಗಳು ಹಾಗೂ ಗುರಿ ಉದ್ದೇಶ ಗಳನ್ನು, ಸಮಸ್ತ ಶಿಕ್ಷಕ ಬಾಂಧವರಿಗೆ ಸಂವಾದದೊಂದಿಗೆ ಉಪನ್ಯಾಸವನ್ನು ರಾಜ್ಯದ ಗೌರವಾನ್ವಿತ ಮಹಿಳಾ ಅಧಿ ಕಾರಿ ಡಾ. ಗುಣವತಿ.S ರವರು ಇಂದು ಅತ್ಯಂತ ಸುದೀರ್ಘ ವಾಗಿ ಸುಮಾರು ಎರಡೂವರೆ ತಾಸುಗಳ ಕಾಲ ರಾಜ್ಯದ ಮೂಲೆ ಮೂಲೆಯಿಂದ ಕರೆ ಮಾಡಿ ಕೇಳಿದ ಪ್ರಶ್ನೆಗಳಿಗೆ ಅತ್ಯಂತ ಸಾವಧಾನವಾಗಿ,ನಿರಾಸಾಯವಾಗಿ ಸಮಂಜಸ ವಾಗಿ ಉತ್ತರಿಸಿ ವಿಶ್ಲೇಷಿಸಿದ್ದಾರೆ.ಬಿಡುವಿಲ್ಲದ ಅವರ ಕರ್ತವ್ಯದ ಅವಧಿಯ ನಡುವೆಯೂ ರಾಜ್ಯಾಧ್ಯಕ್ಷರ ಕರೆಗೆ ಓಗೊಟ್ಟು ಎಲ್ಲರ ಪ್ರೀತಿಪೂರ್ವಕ ಅಭಿಮಾನಕ್ಕೆ ಮನನಣೆ ನೀಡಿ ಆಗಮಿಸಿ ಕಾರ್ಯಕ್ರಮವನ್ನ ಯಶಸ್ವಿಯಾಗಿ ನಡೆಸಿ ಕೊಟ್ಟರು.ಕಾರ್ಯಕ್ರಮದ ಗೌರವ ಉಪಸ್ಥಿತರಾಗಿ ರಾಜ್ಯ ನಲಿಕಲಿ ಸಂಪನ್ಮೂಲ ವ್ಯಕ್ತಿಯಾದ ಶ್ರೀಯುತ ರವೀಂದ್ರ R.D ಅವರು ಸಹ ಉಪಸ್ಥಿತರಿದ್ದು ಅವರನ್ನ ಮನದಾಳ ದಿಂದ ಎಲ್ಲರಿಗೂ ಪರಿಚಯಮಾಡಿಕೊಟ್ಟರು.ಇಂತಹ ಶಿಕ್ಷಕ ಸ್ನೇಹಿ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿದ್ದು,ಇನ್ನೂ ಹೆಚ್ಚಿನ ಇಂತಹ ಕಾರ್ಯಕ್ರಮಗಳು ಮೂಡಿಬರಲಿ ಎಂದು ಡಾ.ಗುಣವತಿ ಅವರೇ ಸ್ವತಃ ಹೇಳಿ ಕರ್ನಾಟಕ ಸಾವಿತ್ರಿ ಬಾಯಿ ಪುಲೆ ಶಿಕ್ಷಕಿಯರ ಸಂಘದ ಮೇಲಿನ ಅಭಿಮಾನ ವನ್ನ ವ್ಯಕ್ತಪಡಿಸಿದ್ದಾರೆ.ಕಾರ್ಯಕ್ರಮ ಯಶಸ್ವಿಗೆ ಕಾರಣ ರಾದ ಡಾ.ಗುಣವತಿ ರವರಿಗೆ ಹಾಗೂ ಭಾಗವಹಿಸಿ ಕಾರ್ಯ ಕ್ರಮಕ್ಕೆ ಮೆರಗನ್ನ ಕೊಟ್ಟ ಶ್ರೀ ರವೀಂದ್ರ ಆರ್.ಡಿ ರವರಿಗೆ ಹಾಗೂ ರಾಜ್ಯ ತಾಂತ್ರಿಕ ಸಮಿತಿಯ ಮುಖ್ಯಸ್ಥರು, ಸದಸ್ಯ ರುಗಳಿಗೆ,ಸಹಕಾರ ನೀಡಿದ ಎಲ್ಲರಿಗೂ ಹಾಗೂ ಭಾಗವಹಿ ಸಿದ್ದ ರಾಜ್ಯದ ಎಲ್ಲಾ ಶಿಕ್ಷಕ- ಶಿಕ್ಷಕಿಯರಿಗೂ,ಇಲಾಖೆಯ ಎಲ್ಲಾ ಹಂತದ ಅಧಿಕಾರಿ ಬಂಧುಗಳಿಗೂ ಅನಂತ ಧನ್ಯ ವಾದಗಳನ್ನು ಅರ್ಪಿಸಿದ್ದಾರೆ.ಅಲ್ಲದೇ ಇದೇ ವಿಷಯವಾಗಿ ನಿರಾಸೆಗೊಳಗಾದವರಿಂದ ಮತ್ತೊಂದು ವೆಬಿನಾರ್ ಆಯೋಜಿಸಲು ಬೇಡಿಕೆ ಬಂದಿರುವ ಕಾರಣ ಸದ್ಯದಲ್ಲಿ ಯೇ ಆಯೋಜಿಸಲು ಒಪ್ಪಿರುತ್ತಾರೆ.
ವಂದನೆಗಳೊಂದಿಗೆ
ಡಾ. ಲತಾ. ಎಸ್. ಮುಳ್ಳೂರ ಸಂಸ್ಥಾಪಕ ರಾಜ್ಯಾಧ್ಯಕ್ಷರು. ಹಾಗೂ ರಾಜ್ಯ ಜಿಲ್ಲಾ ತಾಲೂಕು ಪದಾಧಿಕಾರಿಗಳು. ರಾಜ್ಯ ತಾಂತ್ರಿಕ ಸಮಿತಿ ಸದಸ್ಯರು ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ) ರಾಜ್ಯ ಘಟಕ ಧಾರವಾಡ
ಅಧ್ಯಕ್ಷತೆ ಲತಾ. ಮುಳ್ಳೂರ
ಪ್ರಾಸ್ತಾವಿಕ ನುಡಿ
ನಿರೂಪಣೆ.ರಾಜೇಶ್ವರಿ. ಸಜ್ಜೆಶ್ವರ
ಸ್ವಾಗತ. ಶ್ರೀಮತಿ.ಹೇಮಾ. ಕೊಡ್ಡಣನವರ
ಪರಿಚಯ. ಶ್ರೀ. ರವೀಂದ್ರ. R. D. ಸರ
ವಂದನಾರ್ಪಣೆ. ಶ್ರೀಮತಿ. ಸರಸ್ವತಿ. ಮೈಸೂರ ವಿಭಾಗ ಮಟ್ಟದ ಸಂಘಟನಾ ಕಾರ್ಯದರ್ಶಿ.
ವೇಬಿನಾರ ಉಸ್ತುವಾರಿ. ಶ್ರೀಮತಿ ಭುವನೇಶ್ವರಿ