ಧಾರವಾಡ-
ಮೈಸೂರು ಕಾರಾಗೃಹದಲ್ಲಿದ್ದಕೊಂಡು ಧಾರವಾಡದ ಕೆಲ ಉಧ್ಯಮಿಗಳಿಗೆ ವ್ಯಾಪಾರಸ್ಥರಿಗೆ ಗಣ್ಯರಿಗೆ, ಕರೆ ಮಾಡಿ ಜೀವ ಬೆದರಿಕೆ ಹಾಕುತ್ತಿದ್ದ ಆರೋಪದ ಮೇಲೆ ಭೂಗತ ಪಾತಕಿ ಬಚ್ಚಾಖಾನ್ ನನ್ನು ಧಾರವಾಡ ಉಪನಗರ ಪೊಲೀಸರು ವಶಕ್ಕೆ ತಗೆದುಕೊಂಡಿದ್ದಾರೆ.
ಮೈಸೂರಿನ ಕಾರಾಗೃಹದಲ್ಲಿದ್ದ ಬಚ್ಚಾಖಾನ್ ನನ್ನು ಧಾರವಾಡ ಉಪನಗರ ಪೊಲೀಸ್ ಠಾಣೆ ಇನಸ್ಪೇಕ್ಟರ್ ಪ್ರಮೋದ ಯಲಿಗಾರ ನಿನ್ನೇಯಷ್ಟೇ ವಶಕ್ಕೆ ತಗೆದುಕೊಂಡು ಬಂದಿದ್ದಾರೆ.
ನಿನ್ನೇ ಕರೆದುಕೊಂಡು ಬಂದು ಧಾರವಾಡ ಕೇಂದ್ರ ಕಾರಾಗೃಹದಲ್ಲಿ ಇಡಲಾಗಿದ್ದ ಬಚ್ಚಾಖಾನ್ ನನ್ನು ನ್ಯಾಯಾಲಯಕ್ಕೇ ಹಾಜರು ಮಾಡಲಾಯಿತು.
ಕೇಂದ್ರ ಕಾರಾಗೃಹದಿಂದ ಧಾರವಾಡದ ಮೊದಲ ಪ್ರೀನ್ಸಿಪಲ್ ಸಿವೀಲ್ ನ್ಯಾಯಾಲಯಕ್ಕೇ ಹಾಜರು ಮಾಡಲಾಯಿತು.
ಪೊಲೀಸ್ ಭದ್ರತೆಯ ನಡುವೆ ನ್ಯಾಯಾಲಯಕ್ಕೇ ಉಪನಗರ ಪೊಲೀಸರು ಬಚ್ಚಾಖಾನ್ ನನ್ನು ಕರೆದುಕೊಂಡು ಬಂದು ಹಾಜರು ಮಾಡಿದರು.
ಇನಸ್ಪೇಕ್ಟರ್ ಪ್ರಮೋದ ಯಲಿಗಾರ, ಪಿಎಸೈ ಶ್ರೀಮಂತ ಹುಣಸಿಕಟ್ಟಿ, ಅವರು ಕಾರಾಗೃಹದಿಂದ ನ್ಯಾಯಾಲಯಕ್ಕೇ ಕರೆದುಕೊಂಡು ಬಂದು ನ್ಯಾಯಾಧೀಶರ ಮುಂದೆ ಹಾಜರು ಮಾಡಿದರು.
ಮೈಸೂರು ಜೈಲಿನಲ್ಲಿದ್ದುಕೊಂಡೇ ಧಾರವಾಡದ ಅನೇಕರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂಬ ಆರೋಪ ಮತ್ತು ರೆಹಮಾನ್ ದರ್ಗಾದ ಎಂಬವರು ತಮಗೆ ಬಚ್ಚಾಖಾನ್ ರಿಂದ ಜೀವ ಬೆದರಿಕೆ ಇದೆ ಎಂದು ಉಪನಗರ ಪೊಲೀಸರಿಗೆ ದೂರನ್ನು ನೀಡಿದ್ದರು.ಈ ಕುರಿತಂತೆ ಪ್ರಕರಣ ದಾಖಲು ಮಾಡಿಕೊಂಡಿರುವ ಉಪನಗರ ಪೊಲೀಸರು ಮೈಸೂರಿನ ಕಾರಾಗೃಹದಲ್ಲಿದ್ದ ಇವರನ್ನು ವಶಕ್ಕೇ ತಗೆದುಕೊಂಡಿದ್ದಾರೆ.
ಜೀವ ಬೆದರಿಕೆ ಹಾಕುತ್ತಾ ತನ್ನ ಬಂಟರ ಮೂಲಕ ಧಮ್ಕಿ ಹಾಕಿಸಿ ಹಫ್ತಾ ವಸೂಲಿಗಿಳಿದಿದ್ದನಂತೆ ಬಚ್ಚಖಾನ್. ಜೊತೆಗೆ ಫ್ರೂಟ್ ಇರ್ಫಾನ್ ಸಾವಿನ ಬಳಿಕವೂ ಹುಬ್ಬಳ್ಳಿ-ಧಾರವಾಡ ಮೇಲೆ ಹಿಡಿತ ಸಾಧಿಸಲು ಮುಂದಾಗಿರೋ ಬಚ್ಚಾಖಾನ್ ಗೆ ಕೊನೆಗೂ ಧಾರವಾಡ ಉಪನಗರ ಪೊಲೀಸ್ ಇನಸ್ಪೇಕ್ಟರ್ ಪ್ರಮೋದ ಯಲಿಗಾರ ಕಡಿವಾಣ ಹಾಕಲು ಮುಂದಾಗಿದ್ದಾರೆ.
ಕಾರಾಗೃಹದಲ್ಲಿದ್ದುಕೊಂಡು ಠಾಣೆ ವ್ಯಾಪ್ತಿಯಲ್ಲಿ ಅನೇಕ ಉದ್ಯಮಿಗಳಿಗೆ ಬೆದರಿಕೆ ಪೆಟ್ರೋಲ್ ಬಂಕ್ ಮಾಲೀಕರು ಸೇರಿ ಅನೇಕರಿಗೆ ಬಚ್ಚಾಖಾನ್ ಬಂಟರಿಂದ ಧಮ್ಕಿ ಬರುತ್ತಿತ್ತಂತೆ ಈ ಹಿನ್ನೆಲೆಯಲ್ಲಿ ಬಚ್ಚಾಖಾನ್ ನನ್ನು ಸಧ್ಯ ವಶಕ್ಕೆ ಪಡೆದ ಉಪನಗರ ಠಾಣೆ ಪೊಲೀಸರು ನ್ಯಾಯಾಲಯಕ್ಕೇ ಹಾಜರು ಮಾಡಿದರು.
ಇದರೊಂದಿಗೆ ಈಗಾಗಲೇ ಬಚ್ಚಾಖಾನ್‌ನ ಮೂವರು ಬಂಟರನ್ನೂ ಕೂಡಾ ವಶಕ್ಕೇ ತಗೆದುಕೊಂಡಿದ್ದು ಅವರನ್ನು ನ್ಯಾಯಾಲಯಕ್ಕೇ ಹಾಜರು ಮಾಡಿ ಹೆಚ್ಚಿನ ವಿಚಾರಣೆಗಾಗಿ ನಾಲ್ಕು ಜನರನ್ನು ವಶಕ್ಕೇ ತಗೆದುಕೊಂಡು ಹೆಚ್ಚಿನ ವಿಚಾರಣೆ ಮತ್ತು ತನಿಖೆ ಮಾಡಲಿದ್ದಾರೆ ಪೊಲೀಸರು ಸಾಧ್ಯತೆ