ಧಾರವಾಡ –
ಧಾರವಾಡದಲ್ಲಿ ಹಿರಿಯ ಪತ್ರಕರ್ತ ರೊಬ್ಬರು ನಿಧನ ರಾಗಿದ್ದಾರೆ.ಹೌದು ಕಳೆದ ಹಲವಾರು ವರ್ಷಗಳಿಂದ ಸಂಜೆವಾಣಿ ಪತ್ರಿಕೆಯಲ್ಲಿ ವರದಿಗಾರರಾಗಿದ್ದ ಸೂರ್ಯಕಾಂತ ಶಿರೂರ ಮೃತರಾದ ಪತ್ರಕರ್ತ ರಾಗಿದ್ದಾರೆ.

ಪತ್ರಿಕೆಯ ಹಿರಿಯ ವರದಿಗಾರರು ಹಾಗೇ ಸಂಘದ ಸದಸ್ಯರಾಗಿದ್ದರು ಸೂರ್ಯಕಾಂತ ಶಿರೂರ. ಗುರುವಾರ ರಾತ್ರಿ 10 ಗಂಟೆ ಸುಮಾರಿಗೆ ನಿಧನರಾ ದರು.ಅನಾರೋಗ್ಯ ಹಿನ್ನೆಲೆಯಲ್ಲಿ ಕಳೆದ ಹತ್ತು ದಿನಗಳ ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾ ಗಿತ್ತು ಚಿಕಿತ್ಸೆ ಯನ್ನು ಪಡೆದುಕೊಳ್ಳುತ್ತಿದ್ದ ಇವರು ಚಿಕಿತ್ಸೆ ಫಲಿಸದೇ ಮೃತರಾದರು.ನಿಧನರಾದ ಇವರ ಅಗಲಿಕೆಯ ನೋವು ಮಾಧ್ಯಮ ಕ್ಷೇತ್ರದಲ್ಲಿ ದೊಡ್ಡ ಆಘಾತವಾಗಿದ್ದು ಕಾರ್ಯನಿರತ ಪತ್ರಕರ್ತರ ಸಂಘದ ಸರ್ವರೂ ಭಾವಪೂರ್ಣ ನಮನ ಸಲ್ಲಿಸಿ ಸಂತಾಪವನ್ನು ಸೂಚಿಸಿದ್ದಾರೆ