ಧಾರವಾಡ –
ಧಾರವಾಡ ತಹಶೀಲ್ದಾರರಾಗಿ ಸಂತೋಷ ಎಸ್. ಹಿರೇಮಠ ಅವರು ಅಧಿಕಾರ ವನ್ನು ವಹಿಸಿಕೊಂಡರು ಹೌದು ನಿಗರ್ಮಿತ ತಹಶೀಲ್ದಾರ ಸಂತೋಷ ಬಿರಾದಾರ ಅವರಿಂದ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.
2015ನೇ ಸಾಲಿನ ಕೆಎಎಸ್ ಅಧಿಕಾರಿಯಾಗಿರುವ ಸಂತೋಷ ಎಸ್. ಹಿರೇಮಠ ಅವರು ಹುಬ್ಬಳ್ಳಿ ಮೂಲದ ವರಾಗಿದ್ದು ಧಾರವಾಡ ತಹಶೀಲ್ದಾರರಾಗಿನೇಮಕಗೊಳ್ಳುವ ಮೋದಲು ಹುಬ್ಬಳ್ಳಿ ತಹಶೀಲ್ದಾರ ಕಚೇರಿಯಲ್ಲಿ ಶಿಷ್ಟಾ ಚಾರ ವಿಭಾಗದ ತಹಶೀಲ್ದಾರರಾಗಿ ಸೇವೆ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ನಿರ್ಗಮಿತ ತಹಶೀಲ್ದಾರ ಸಂತೋಷ ಬಿರಾದಾರ,ತಹಶೀಲ್ದಾರ ಕಚೇರಿಯ ಶಿರಸ್ತೆದಾರರಾದ ಪಿ.ಎಸ್.ಪೂಜಾರ,ಮಂಜುನಾಥ ಗುಳ್ಳಪ್ಪನವರ,ರಮೇಶ ಬಂಡಿ,ಕಂದಾಯ ನಿರೀಕ್ಷಕರಾದ ಗುರು ಸುಣಗಾರ, ಐ.ಎಸ್.ಐಯನಗೌಡರ್,ಗುರು ವಡೆಯರ್,ಪ್ರವೀಣ್ ಕುಲಕರ್ಣಿ,ಆನಂದ,ಶಿವಾನಂದ ಹೆಬ್ಬಳ್ಳಿ ಸೇರಿದಂತೆ ವಿವಿಧ ಅಧಿಕಾರಿ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.