ಕೊಪ್ಪಳ –
ಸಾಮಾನ್ವವಾಗಿ ಶಿಕ್ಷಕರು ಎಂದರೆ ಸಮಾಜದಲ್ಲಿ ದೊಡ್ಡ ಸ್ಥಾನ ಮಾನ ಗೌರವ ಇದೆ.ಇವರನ್ನು ಗುರುಗಳ ರೂಪದಲ್ಲಿ ಇಡೀ ಸಮಾಜವೇ ಕಾಣುತ್ತದೆ ಹೀಗಿರುವಾಗ ಇಲ್ಲೊರ್ವ ಎಣ್ಣೇ ಮೇಸ್ಟ್ರು ನಿಂದಾಗಿ ಶಿಕ್ಷಕ ಸಮುದಾಯವೇ ತಲೆ ತಗ್ಗಿಸುವಂತಾಗುತ್ತಿದೆ.ಹೌದು ಶಿಕ್ಷಕನೋರ್ವ ಶಾಲೆಗೆ ಗೈರಾಗಿ ಕಂಠ ಪೂರ್ತಿ ಕುಡಿದು ಎಣ್ಣೆ ಮತ್ತಿನಲ್ಲಿ ತೂರಾಡಿಕೊಂಡು ಹೋಗುತ್ತಾರೆ.ಹೀಗೆ ಹೋಗುವಾಗ ಬಿದ್ದು ತಲೆಗೆ ಗಾಯ ಮಾಡಿ ಕೊಂಡಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ
ಜಿಲ್ಲೆಯ ಕುಷ್ಟಗಿ ತಾಲೂಕಿನ ಚಿಕ್ಕನಂದಿಹಾಳ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಕೃಷ್ಣೇಗೌಡ ಎಂಬುವರೆ ಈ ಒಂದು ಎಡವಟ್ಟು ಮಾಡಿಕೊಂಡವರಾಗಿದ್ದಾರೆ.ಮೂಲತಃ ಹಾಸನ ಜಿಲ್ಲೆಯವರಾಗಿರುವ ಇವರು ಪರಸ್ಪರ ವರ್ಗವಣೆ ಮೇರೆಗೆ ಚಿಕ್ಕನಂದಿಹಾಳ ಶಾಲೆಗೆ ಈಗಷ್ಟೇ ಬಂದಿ ದ್ದಾರೆ. ಕುಷ್ಟಗಿ ಬಸ್ ನಿಲ್ದಾಣದ ಬಳಿ ಸದರಿ ಶಿಕ್ಷಕ ಕೃಷ್ಣೆಗೌಡ ಕಂಠ ಪೂರ್ತಿ ಕುಡಿದು ತೂರಾಡಿ ಕೊಂಡು ಬಸ್ ನಿಲ್ದಾಣದ ಬಳಿ ಎಡವಿ ಬಿದ್ದು ತಲೆಗೆ ಗಾಯ ಮಾಡಿಕೊಂಡಿದ್ದಾರೆ.
ಸ್ಥಳೀಯರು ಕೂಡಲೇ 108 ಆಯಂಬ್ಯುಲೆನ್ಸ್ ಗೆ ಕರೆ ಮಾಡಿ ತಿಳಿಸಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡಿಕೊಂಡಿರಬೇಕಾದ ಶಿಕ್ಷಕ ಕೃಷ್ಣೆಗೌಡ ಗೈರಾಗಿ ಕುಷ್ಟಗಿ ಪಟ್ಟಣದಲ್ಲಿ ಕುಡುಕನಂತೆ ತೂರಾಡಿಕೊಂ ಡಿರುವ ನಡವಳಿಕೆಗೆ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದು ಚಿಕ್ಕನಂದಿಹಾಳ ಶಾಲೆಗೆ ಪರಸ್ಪರ ವರ್ಗಾವಣೆ ಮೇರೆಗೆ ಶಿಕ್ಷಕ ಸೇವೆಯಲ್ಲಿದ್ದು ಪದೇ ಪದೇ ಗೈರು ಹಿನ್ನೆಲೆಯಲ್ಲಿ ನೋಟೀಸ್ ನೀಡಿ ವೇತನ ತಡೆಹಿಡಿಯಲಾಗಿತ್ತು ಈ ಪ್ರಕರಣದ ಹಿನ್ನೆಲೆಯಲ್ಲಿ ಕ್ರಮ ಜರುಗಿಸಬೇಕಿದೆ ಇನ್ನೂ ಈ ಒಂದು ಸುದ್ದಿಯನ್ನು ತಿಳಿದ ಸಿಆರ್ ಪಿ ಶಾಲೆಗೆ ಸ್ಥಾನಿಕ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಕೊಪ್ಪಳ…..